ಉತ್ತರ ಕನ್ನಡ ಇಬ್ಭಾಗಕ್ಕೆ ಡಾ. ಮಹೇಶ ಜೋಶಿ ಬೆಂಬಲ

ಹೊಸದಿಗಂತ ವರದಿ ಅಂಕೋಲಾ:

ಉತ್ತರ ಕನ್ನಡ ಜಿಲ್ಲೆಯನ್ನು ಆಡಳಿತಾತ್ಮಕ ದೃಷ್ಡಿಯಿಂದ ಇಬ್ಭಾಗ ಮಾಡಬೇಕು ಎನ್ನುವ ಮೂಲಕ ಕಸಾಪ ರಾಜ್ಯಾಧ್ಯಕ್ಷ. ಡಾ. ಮಹೇಶ ಜೋಶಿ ಜಿಲ್ಲೆ ಇಬ್ಭಾಗಕ್ಕೆ ಬಹಿರಂಗ ಬೆಂಬಲ ನೀಡಿದರು.
ಅವರು ಸೋಮವಾರ ಇಲ್ಲಿಯ ನಾಡವರ ಸಭಾಭವನದಲ್ಲಿ ಉ.ಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಏರ್ಪಡಿಸಿದ್ದ ಉತ್ತರ ಕನ್ನಡ ಜಿಲ್ಲೆಯ ಬರೆಹಗಾರರ ಸಮ್ಮಿಲನ ಅಕ್ಷರೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಉತ್ತರ ಕನ್ನಡ ಜಿಲ್ಲೆ ಭೌಗೋಳಿಕವಾಗಿ ವಿಸ್ತಾರ ಮತ್ತು ಕರಾವಳಿ, ಮಲೆನಾಡು, ಬಯಲುಸೀಮೆಯನ್ನು ಹೊಂದಿದ ಜಿಲ್ಲೆ. ಜಿಲ್ಲಾ ಕೇಂದ್ರಕ್ಕೆ ಆಡಳಿತಾತ್ಮಕ ಕೆಲಸಕ್ಕೆ ಬರಲು ಜನರು ಹೆಣಗಾಡುತ್ತಿದ್ದಾರೆ. ಅಭಿವೃದ್ದಿಯಲ್ಲೂ ಹಿಂದುಳಿದೆ. ಧಾರವಾಡ ಜಿಲ್ಲೆ ಧಾರವಾಡ, ಗದಗ, ಹಾವೇರಿ ಜಿಲ್ಲೆಗಳಾಗಿ ಒಡೆದ ಮೇಲೆ ಮೂರು ಜಿಲ್ಲೆಗಳು ಬೆಳೆದಿವೆ. ಇಂತಹ ವ್ಯವಸ್ಥೆ ಉ.ಕ ಜಿಲ್ಲೆಯಲ್ಲೂ ಆಗಬೇಕು. ಇದರಲ್ಲಿ ರಾಜಕೀಯ ಇಲ್ಲವೇ ಇಲ್ಲ. ಜಿಲ್ಲೆ ಇಬ್ಭಾಗಕ್ಕೆ ಕಸಾಪ ಬೆಂಬಲ ನೀಡುವ ಮೂಲಕ ಒತ್ತಾಯ ಮಾಡುತ್ತದೆ ಎಂದರು.

ಈ ಸಂದರ್ಭದಲ್ಲಿ ಹಿರಿಯ ಸಾಹಿತಿ ಕಾಳೆಗೌಡ ನಾಗವಾರ , ಮುಖ್ಯ ಅತಿಥಿಗಳಾದ ಡಾ. ಎನ್.ಆರ್.ನಾಯಕ, ವಿಷ್ಣು ನಾಯ್ಕ, ವಿ.ಗ.ನಾಯಕ, ಭಾಗೀರಥಿ ಹೆಗಡೆ , ಡಾ. ಝಮೀರುಲ್ಲಾ ಷರೀಫ್, ಕಸಾಪ ಗೌರವ ಕಾರ್ಯದರ್ಶಿ ನೇ.ಭ. ರಾಮಲಿಂಗಶೆಟ್ಟಿ, ಗೌರವ ಕೋಶಾಧ್ಯಕ್ಷ ಡಾ. ಬಿ.ಎಂ. ಪಟೇಲ ಪಾಂಡು, ಜಾರ್ಜ್ ಫರ್ನಾಂಡೀಸ್,ಜಿಲ್ಲಾ ಗೌರವ ಕೋಶಾಧ್ಯಕ್ಷ ಮರ್ತುಜಾ ಹುಸೇನ್ ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!