ಮಹಿಂದ್ರಾ ಪಿಕ್ ಅಫ್ ವಾಹನ ಪಲ್ಟಿ: 15 ಶಾಲಾ ವಿದ್ಯಾರ್ಥಿಗಳಿಗೆ ಗಾಯ

ಹೊಸದಿಗಂತ ವರದಿ, ಕಲಬುರಗಿ:

ಮಹಿಂದ್ರಾ ಪಿಕ್ ಅಫ್ ಗೂಡ್ಸ್ ವಾಹನ ಪಲ್ಟಿಯಾದ ಪರಿಣಾಮ 15 ಶಾಲಾ ಮಕ್ಕಳು ಗಾಯಗೊಂಡಿರುವ ಘಟನೆ ಸೋಮವಾರ ಕಲಬುರಗಿ ಜಿಲ್ಲೆಯ ಕಮಲಾಪುರ ತಾಲೂಕಿನ ಮಡಕಿ ಗ್ರಾಮದ ಬಳಿ ನಡೆದಿದೆ.

ಮಹಾಗಾಂವ್,ದಿಂದ ಮಡಕಿ ತಾಂಡಾ ಕಡೆಗೆ ಶಾಲೆಯ ಮಕ್ಕಳು ಶಾಲಾ ಮುಗಿಸಿಕೊಂಡು ಹೋಗುತ್ತಿದ್ದ ಪಿಕ ಅಫ್ ವಾಹನವು ಚಾಲಕನ ನಿಯಂತ್ರಣ ತಪ್ಪಿ,ನೆಲಕ್ಕೆ ಉರುಳಿದೆ.

ಸಕಾ೯ರಿ ಬಸ್ ಸಮಯಕ್ಕೆ ಸರಿಯಾಗಿ ಬಾರದ ಹಿನ್ನೆಲೆಯಲ್ಲಿ ಶಾಲಾ ಮಕ್ಕಳು ಪಿಕ್ ಅಫ್ ಗೂಡ್ಸ್ ವಾಹನದಲ್ಲಿ ತಮ್ಮ ಮನೆಗೆ ತೆರಳಲು ಮಕ್ಕಳು ಹತ್ತಿದ್ದರು.ಈ ನಡುವೆ ಈ ಘಟನೆ ಸಂಭವಿಸಿದೆ.

ಗಾಯಾಳು ಶಾಲಾ ವಿದ್ಯಾರ್ಥಿಗಳನ್ನು ನಗರದ ಜಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು,ನಾಲ್ಕು ವಿದ್ಯಾರ್ಥಿಗಳ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.

ನರೋಣಾ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!