ʻಮೇಕ್‌ ಇನ್ ಇಂಡಿಯಾ‌ʼ ಯೋಜನೆಯ ಫಲಿತಾಂಶ: ಆಟಿಕೆಗಳ ರಫ್ತಿನಲ್ಲಿ ಶೇ.636ರಷ್ಟು ಹೆಚ್ಚಳ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಕೇಂದ್ರ ಸರ್ಕಾರ ತಂದಿರುವ ‘ಮೇಕ್ ಇಂಡಿಯಾ’ ಯೋಜನೆ ಮೂಲಕ ಪ್ರಗತಿ ಕಂಡ ಕ್ಷೇತ್ರಗಳಲ್ಲಿ ಆಟಿಕೆ ತಯಾರಿಕೆಯೂ ಒಂದು. ಒಂದು ಕಾಲದಲ್ಲಿ ನಮ್ಮ ದೇಶಕ್ಕೆ ಆಟಿಕೆಗಳು ಹೆಚ್ಚಾಗಿ ವಿದೇಶದಿಂದ ಆಮದಾಗುತ್ತಿದ್ದವು. ಆದರೆ, ಮೇಕ್ ಇಂಡಿಯಾದ ಫಲವಾಗಿ ಇಲ್ಲಿ ತಯಾರಾದ ಆಟಿಕೆಗಳನ್ನು ದೇಶದಲ್ಲಿ ಮಾರಾಟ ಮಾಡುವುದಲ್ಲದೆ, ಹೊರ ದೇಶಗಳಿಗೂ ಕಂಪನಿಗಳು ರಫ್ತು ಮಾಡುತ್ತಿವೆ.

ಈ ವರ್ಷದ ಏಪ್ರಿಲ್-ಆಗಸ್ಟ್‌ನಿಂದ ಆಟಿಕೆಗಳ ರಫ್ತಿನಲ್ಲಿ 636 ಪ್ರತಿಶತ ಬೆಳವಣಿಗೆಯಾಗಿದೆ ಎಂದು ವಾಣಿಜ್ಯ ಇಲಾಖೆ ಶನಿವಾರ ವರದಿ ಮಾಡಿದೆ. ಹಿಂದೆ ನಮ್ಮ ದೇಶ ಆಟಿಕೆಗಳಿಗಾಗಿ ಹೊರ ದೇಶಗಳನ್ನೇ ಹೆಚ್ಚಾಗಿ ಅವಲಂಬಿಸಬೇಕಿತ್ತು. ನಮಗೆ ಕಚ್ಚಾವಸ್ತು, ತಂತ್ರಜ್ಞಾನ, ವಿನ್ಯಾಸ ಕೌಶಲ್ಯ ಮತ್ತು ಇವುಗಳನ್ನು ತಯಾರಿಸಲು ಮಾನವಶಕ್ತಿಯಂತಹ ಸಂಪನ್ಮೂಲಗಳ ಕೊರತೆಯಿಂದಾಗಿ ವಿದೇಶಗಳಿಂದ ಆಮದು ಮಾಡಿಕೊಳ್ಳಬೇಕಾದ ಪರಿಸ್ಥಿತಿಯಿತ್ತು.  2018-19ರಲ್ಲಿ ಭಾರತ ಸುಮಾರು ರೂ.2,960 ಕೋಟಿ ಮೌಲ್ಯದ ಆಟಿಕೆಗಳನ್ನು ಆಮದು ಮಾಡಿಕೊಂಡಿದೆ. ಅವುಗಳ ತಯಾರಿಕೆಯಲ್ಲಿ ಹಾನಿಕಾರಕ ರಾಸಾಯನಿಕಗಳು ಮತ್ತು ಬಣ್ಣಗಳನ್ನು ಬಳಸಲಾಗುತ್ತಿತ್ತು. ಅದಕ್ಕಾಗಿಯೇ ವಿದೇಶದಿಂದ ಆಮದು ಮಾಡಿಕೊಳ್ಳುವುದನ್ನು ಕಡಿಮೆ ಮಾಡಿ ಇಲ್ಲಿಯೇ ಆಟಿಕೆ ತಯಾರಿಸಲು ಕೇಂದ್ರ ನಿರ್ಧರಿಸಿದೆ.

ಸಬ್ಸಿಡಿಗಳು, ಮಾನವ ಸಂಪನ್ಮೂಲ ಮತ್ತು ಮಾರುಕಟ್ಟೆಯಂತಹ ವಿಷಯಗಳಲ್ಲಿ ಸರ್ಕಾರವು ಬೆಂಬಲವನ್ನು ನೀಡುತ್ತಿದೆ. ಮೂರು ವರ್ಷಗಳಿಂದ ಬೊಂಬೆಗಳಿಗೆ ಸಂಬಂಧಿಸಿದ ವಿಶೇಷ ಸಮ್ಮೇಳನಗಳನ್ನು ಆಯೋಜಿಸುತ್ತಿದೆ. ಇದು ದೇಶೀಯ ಆಟಿಕೆ ತಯಾರಿಕೆಯನ್ನು ಉತ್ತೇಜಿಸಿದೆ. ದೊಡ್ಡ ಪ್ರಮಾಣದಲ್ಲಿ ಆಟಿಕೆಗಳನ್ನು ತಯಾರಿಸುತ್ತಿರುವುದರಿಂದ ಕಂಪನಿಗಳು ಆಟಿಕೆಗಳನ್ನು ಹೊರ ದೇಶಗಳಿಗೆ ರಫ್ತು ಮಾಡುತ್ತಿವೆ. 2013 ಕ್ಕೆ ಹೋಲಿಸಿದರೆ 2022 ರಲ್ಲಿ ಆಟಿಕೆಗಳ ರಫ್ತು ಶೇಕಡಾ 636 ರಷ್ಟು ಹೆಚ್ಚಾಗಿದೆ ಎಂದು ಕೇಂದ್ರ ತಿಳಿಸಿದೆ. ಮೇಡ್‌ ಇನ್ ಇಂಡಿಯಾ ಅಲ್ಲ, ಮೇಡ್ ಫಾರ್ ವರ್ಲ್ಡ್ ಪರಿಕಲ್ಪನೆಯೊಂದಿಗೆ ಆಟಿಕೆ ತಯಾರಿಕೆ ನಡೆಯುತ್ತಿದೆ ಎಂದು ಕೇಂದ್ರ ಬಹಿರಂಗಪಡಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!