ಮಲೇಷ್ಯಾ ಭೂಕುಸಿತ: ಸಾವಿನ ಸಂಖ್ಯೆ 22ಕ್ಕೆ ಏರಿಕೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಲೇಷ್ಯಾದ ರಜಾ ಶಿಬಿರದ ಮೇಲೆ ಭೂಕುಸಿತ ಸಂಭವಿಸಿದ್ದು, ಮೃತರ ಸಂಖ್ಯೆ 22 ಕ್ಕೆ ಏರಿಕೆಯಾಗಿದೆ. ಇನ್ನಷ್ಟು ಜನ ಮಣ್ಣಿನಡಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ.

ರಾತ್ರಿಯಿಡೀ ರಕ್ಷಣಾ ಪಡೆಗಳು ಕಾರ್ಯಾಚರಣೆ ನಡೆಸಿದ್ದು, ಈಗಲೂ ಕಾರ್ಯಾಚರಣೆ ಜಾರಿಯಲ್ಲಿದೆ. ಕೌಲಾಲಂಪುರದ ಹೊರವಲಯದ ಸೆಲಂಗೋರ್ ರಾಜ್ಯದಲ್ಲಿ ರಜಾ ಶಿಬಿರದ ಮೇಲೆ ಶುಕ್ರವಾರ ಬೆಳಗಿನ ಜಾವ ಮೂರು ಗಂಟೆಗೆ ಭೂ ಕುಸಿತ ಸಂಭವಿಸಿತ್ತು.

ಟೆಂಟ್‌ಗಳಲ್ಲಿ ಕುಟುಂಬ ಸಮೇತ ನಿದ್ರೆಯಲ್ಲಿದ್ದ ಜನರು ಭೂಕುಸಿತದ ಭೀಕರತೆಗೆ ಸಾಕ್ಷಿಯಾದರು. 400 ರಕ್ಷಣಾ ಕಾರ್ಯಕರ್ತರು ಭಾಗಿಯಾಗಿದ್ದು, 22 ಮಂದಿ ಮೃತಪಟ್ಟಿರುವುದು ದೃಢಪಟ್ಟಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!