VIRAL VIDEO| ಅಂಧ ಪೋಷಕರಿಗೆ ತನ್ನ ಕಣ್ಣುಗಳಿಂದ ಜಗತ್ತು ತೋರಿಸುತ್ತಿರುವ ಬಾಲಕಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಪುಟ್ಟ ಹುಡುಗಿ ತನ್ನ ಅಂಧ ಪೋಷಕರನ್ನು ತಾನೇ ನೋಡಿಕೊಳ್ಳುತ್ತಾಳೆ. ರಸ್ತೆ ಬದಿಯ ಅಂಗಡಿಯೊಂದರಲ್ಲಿ ಬಾಲಕಿ ತಂದೆ-ತಾಯಿಗೆ ತಿಂಡಿ ನೀಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ಮುಂಬೈನ ಅಂಗಡಿಯೊಂದರ ಮುಂದೆ ಶಾಲಾ ಸಮವಸ್ತ್ರದಲ್ಲಿ ಟಿಫಿನ್ ತಿನ್ನುತ್ತಿರುವ ಬಾಲಕಿ ಪಕ್ಕದಲ್ಲೇ ಆಕೆಯ ಅಂಧ ತಂದೆ-ತಾಯಿಯೂ ಕುಳಿತಿದ್ದರು. ಟಿಫಿನ್‌ ಸೆಂಟರ್‌ನಿಂದ ತಿಂಡಿ ಪಡೆದು ತನ್ನ ಹೆತ್ತವರಿಗೆ ನೀಡಿ ತಿಂಡಿ ಸವಿದ ಬಳಿಕ ಅವರನ್ನು ತನ್ನೊಂದಿಗೆ ಕರೆದುಕೊಂಡು ಹೋಗಿದ್ದಾಳೆ. ಇದನ್ನೆಲ್ಲಾ ಅಲ್ಲಿದ್ದ ವ್ಯಕ್ತಿಯೊಬ್ಬ ವಿಡಿಯೋ ಮಾಡಿದ್ದಾನೆ. ಮಿತ್ ಇಂದುಲ್ಕರ್ ಎಂಬ ವ್ಯಕ್ತಿ ಈ ವಿಡಿಯೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ಪ್ರತಿ ದಿನ ಬಾಲಕಿ ತನ್ನ ಪೋಷಕರೊಂದಿಗೆ ಟಿಫಿನ್ ಅಂಗಡಿಗೆ ಕರೆತಂದು ತಿಂಡಿ ಮಾಡಿಸಿ ಕರೆದೊಯ್ಯುತ್ತಾಳಂತೆ. ಬಾಲಕಿಯ ಪೋಷಕರು ಅಂಧರಾಗಿದ್ದರೂ ಅವರು ತಮ್ಮ ಮಗಳ ಕಣ್ಣಿನಿಂದ ಜಗತ್ತನ್ನು ನೋಡುತ್ತಾರೆ. ಈಗಿನ ಕಾಲದಲ್ಲಿ ಚೆನ್ನಾಗಿರುವ ತಂದೆ-ತಾಯಿಯನ್ನು  ನೋಡಿಕೊಳ್ಳುವವರು ಯಾರೂ ಇರುವುದಿಲ್ಲ ಅಂಥದ್ದರಲ್ಲಿ ಪುಟ್ಟ ಬಾಲಕಿಯ ಕಾರ್ಯಕ್ಕೆ ಎಲ್ಲರೂ ಭೇಷ್‌ ಅಂತಿದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!