June 17, 2026
Wednesday, June 17, 2026
spot_img

ಬೇಸಿಗೆಗೆ ಬೆಸ್ಟ್ ಅಡುಗೆ: ಮಲೆನಾಡು ಶೈಲಿಯ ರುಚಿಕರ ಮಜ್ಜಿಗೆ ಹುಳಿ ಮಾಡುವ ಸರಳ ವಿಧಾನ‌

ದಕ್ಷಿಣ ಭಾರತದ, ವಿಶೇಷವಾಗಿ ಕರ್ನಾಟಕದ ಮನೆಮನೆಗಳಲ್ಲಿ ಅತ್ಯಂತ ಜನಪ್ರಿಯವಾಗಿರುವ ಒಂದು ಸಾಂಪ್ರದಾಯಿಕ ಅಡುಗೆ ಎಂದರೆ ಅದು ಮಜ್ಜಿಗೆ ಹುಳಿ. ಇದು ಬಿಸಿಬಿಸಿ ಅನ್ನ ಮತ್ತು ಮುದ್ದೆಗೆ ಅತ್ಯುತ್ತಮ ಕಾಂಬಿನೇಷನ್ ಆಗಿದ್ದು, ಬೇಸಿಗೆಯ ಸಮಯದಲ್ಲಿ ದೇಹದ ಉಷ್ಣತೆಯನ್ನು ಕಡಿಮೆ ಮಾಡಲು ಮತ್ತು ಜೀರ್ಣಕ್ರಿಯೆಯನ್ನು ಉತ್ತಮಗೊಳಿಸಲು ಸಹಕಾರಿಯಾಗಿದೆ. ಇದು ಕೇವಲ ರುಚಿಕರ ಅಡುಗೆಯಷ್ಟೇ ಅಲ್ಲದೆ ಆರೋಗ್ಯಕರ ಆಯ್ಕೆಯೂ ಹೌದು.

ಬೇಕಾಗುವ ಸಾಮಾಗ್ರಿಗಳು:
ಬೂದುಗುಂಬಳಕಾಯಿ
ಗಟ್ಟಿ ಮೊಸರು
ಹಸಿ ಕೊಬ್ಬರಿ
ಹಸಿ ಮೆಣಸಿನಕಾಯಿ
ಜೀರಿಗೆ
ನೆನೆಸಿದ ಕಡಲೆಬೇಳೆ
ಎಣ್ಣೆ
ಸಾಸಿವೆ
ಜೀರಿಗೆ
ಒಣಮೆಣಸಿನಕಾಯಿ
ಕರಿಬೇವು
ಇಂಗು
ಅರಿಶಿನ
ಉಪ್ಪು

ಮಾಡುವ ವಿಧಾನ:
ಮೊದಲು ಕತ್ತರಿಸಿದ ಬೂದುಗುಂಬಳಕಾಯಿಗೆ ಸ್ವಲ್ಪ ನೀರು, ಉಪ್ಪು ಮತ್ತು ಅರಿಶಿನ ಹಾಕಿ ಮೃದುವಾಗುವವರೆಗೆ ಬೇಯಿಸಿಕೊಳ್ಳಬೇಕು. ಬಳಿಕ ಮಿಕ್ಸಿ ಜಾರ್‌ಗೆ ಕೊಬ್ಬರಿ ತುರಿ, ಹಸಿಮೆಣಸಿನಕಾಯಿ, ಜೀರಿಗೆ ಮತ್ತು ನೆನೆಸಿದ ಕಡಲೆಬೇಳೆ ಸೇರಿಸಿ ಸ್ವಲ್ಪ ನೀರು ಹಾಕಿ ನುಣ್ಣಗೆ ರುಬ್ಬಿಕೊಂಡು. ಬೇಯಿಸಿದ ತರಕಾರಿಗೆ ಈ ರುಬ್ಬಿದ ಮಸಾಲೆ ಪೇಸ್ಟ್ ಸೇರಿಸಿ 2-3 ನಿಮಿಷ ಸಣ್ಣ ಉರಿಯಲ್ಲಿ ಹಸಿ ವಾಸನೆ ಕುದಿಸಬೇಕು. ನಂತರ ಮಿಶ್ರಣವು ಕೊಂಚ ಉಗುರುಬೆಚ್ಚಗಾದ ನಂತರ ಮೊಸರು ಅಥವಾ ಮಜ್ಜಿಗೆಯನ್ನು ಸೇರಿಸಿ ಕೈಯಾಡಿಸಿ. ಸಣ್ಣ ಬಾಣಲೆಯಲ್ಲಿ ಎಣ್ಣೆ ಕಾಯಿಸಿ ಸಾಸಿವೆ, ಜೀರಿಗೆ, ಕರಿಬೇವು, ಒಣಮೆಣಸಿನಕಾಯಿ ಮತ್ತು ಇಂಗು ಹಾಕಿ ಒಗ್ಗರಣೆ ಸಿದ್ಧಪಡಿಸಿ ಮಜ್ಜಿಗೆ ಹುಳಿಗೆ ಸೇರಿಸಿದರೆ ರುಚಿಕರವಾದ ಮಜ್ಜಿಗೆ ಹುಳಿ ಸಿದ್ಧವಾಗುತ್ತದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !