ಹೊಸದಿಗಂತ ಡಿಜಿಟಲ್ ಡೆಸ್ಕ್:
ಮೂವರು ಪೊಲೀಸ್ ಅಧಿಕಾರಿಗಳ ಮೇಲೆ ವ್ಯಕ್ತಿಯೋರ್ವ ಗುಂಡಿನ ದಾಳಿ ನಡೆಸಿ ಪರಾರಿಯಾಗಿರುವ ಘಟನೆ ಅಮೆರಿಕದ ಟೆಕ್ಸಾಸ್ ನಲ್ಲಿ ನಡೆದಿದೆ.
ಟೆಕ್ಸಾಸ್ ನಗರದ ಹ್ಯೂಸ್ಟನ್ ನಗರದಲ್ಲಿನ ಮೆಕ್ ಗೋವನ್ ಸೇಂಟ್ ನ 2100 ಬ್ಲಾಕ್ ಬಳಿ ಈ ಘಟನೆ ನಡೆದಿದೆ.
ಬಿಳಿ ಮರ್ಸಿಡೀಸ್ ಬೆನ್ಸ್ ನಲ್ಲಿ ಬಂದ ವ್ಯಕ್ತಿ ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆದಿದೆ. ಬಳಿಕ ಆತ ಮೂವರು ಪೊಲೀಸ್ ಅಧಿಕಾರಿಗಳ ಮೇಲೆ ಗುಂಡು ಹಾರಿಸಿ, ಕಾರಿನಲ್ಲಿ ಪರಾರಿಯಾಗಿದ್ದಾನೆ.
ಗಾಯಗೊಂಡ ಮೂವರು ಪೊಲೀಸರನ್ನು ಮೆಮೋರಿಯಲ್ ಹರ್ಮೆನ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಬಗ್ಗೆ ಹೋಸ್ಟನ್ ಪೊಲೀಸ್ ಇಲಾಖೆ ಮಾಹಿತಿ ನೀಡಿದೆ.