ಹೊಸದಿಗಂತ ವರದಿ, ಕೊಡಗು
ಬೆಂಗಳೂರಿನ ಹೊರವಲಯದ ಕುಂಬಳಗೋಡು ಬಳಿ ಸೋಮವಾರ ನಡೆದ ದುರಂತದಲ್ಲಿ ಕೊಡಗಿನ ಯುವಕನೊಬ್ಬ ಮೃತಪಟ್ಟಿರುವುದಾಗಿ ತಿಳಿದುಬಂದಿದೆ.
ಕುಂಬಳಗೋಡು ಬಳಿ ಜಲ್ಲಿ ಸಾಗಿಸುತ್ತಿದ್ದ ಟಿಪ್ಪರ್, ಎರಡು ಕಾರು ಮತ್ತು ಒಂದು ಬೈಕ್ ಮೇಲೆ ಬಿದ್ದ ಪರಿಣಾಮ ಆರು ಮಂದಿ ಮೃತಪಟ್ಟಿದ್ದರು. ಈ ಪೈಕಿ ಬೈಕ್’ನಲ್ಲಿದ್ದ ಓರ್ವ ಯುವಕನನ್ನು ಕೊಡಗಿನ ಅಭ್ಯತ್’ಮಂಗಲದ ನಿವಾಸಿ ಜಿತಿನ್ ಜಾರ್ಜ್ ಎಂದು ಗುರುತಿಸಲಾಗಿದೆ.
ಅಭ್ಯತ್ ಮಂಗಲದ ಗ್ರೀನ್ ಫೀಲ್ಡ್ ಎಸ್ಟೇಟ್’ನ ವ್ಯವಸ್ಥಾಪಕ ಜಾರ್ಜ್ ಅವರ ಪುತ್ರನಾಗಿರುವ ಜಿತಿನ್,
ಒಂದು ವರ್ಷದ ಹಿಂದೆಯಷ್ಟೇ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗಕ್ಕೆಸೇರಿದ್ದು, ಸೋಮವಾರ ಬೈಕ್’ನಲ್ಲಿ ಬರುತ್ತಿದ್ದಾಗ ಟಿಪ್ಪರ್ ಮಗುಚಿ ಅವರನ್ನು ಬಲಿ ತೆಗೆದುಕೊಂಡಿದೆ.
ಮೃತದೇಹವನ್ನು ಮಂಗಳವಾರ ಸಂಜೆ ಎಸ್ಟೇಟ್’ಗೆ ತಂದು ನಂತರ ಮೂಲ ಊರಾದ ಕೇರಳದ ಪಾಲಕ್ಕಾಡ್’ಗೆ ಕೊಂಡೊಯ್ಯಲಾಗುವುದು ಎಂದು ಕುಟುಂಬದ ಸದಸ್ಯರು ತಿಳಿಸಿದ್ದಾರೆ