ಮುಂಭಾಗ ಚಕ್ರಗಳಿಲ್ಲದ ಟ್ರಕ್‌ ಓಡಿಸಿದ ಚಾಲಕ: ವಿಡಿಯೋ ನೋಡಿ ನೆಟ್ಟಿಗರು ಶಾಕ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಯಾವುದೇ ಟ್ರಕ್ ಅಥವಾ ಟ್ಯಾಂಕರ್ ಅಥವಾ ಯಾಔಉದೇ ವಾಹನ ಚಲಿಸಲು ಮುಂಭಾಗದಲ್ಲಿ ಚಕ್ರಗಳನ್ನು ಹೊಂದಿರಬೇಕು. ಇಲ್ಲದಿದ್ದರೆ ವಾಃಣ ಚಲಿಸುವುದರಲಿ ಅದನ್ನು ವಾಹನ ಅಂತಲೂ ಕರೆಯಲು ಸಾಧ್ಯವಿಲ್ಲ. ಆದರೆ, ಚಾಲಕನೊಬ್ಬ ಮುಂಭಾಗದ ಟೈರ್ ಇಲ್ಲದೆ ಟ್ರಕ್‌ ಓಡಿಸಿರುವ ವಿಡಿಯೋವೊಂದು ವೈರಲ್‌ ಆಗಿದೆ. ಈ ವಿಡಿಯೋ ಪ್ರಕಾರ, ಈಗಾಗಲೇ ಅಪಘಾತಕ್ಕೀಡಾದ ಟ್ಯಾಂಕರ್‌ನ ಮುಂಭಾಗದ ಚಕ್ರಗಳು ಹಾರಿಹೋಗಿವ ರೀತಿ ಕಾಣುತ್ತಿವೆ.

ಮುಂಭಾಗದ ಟೈರ್ ಇಲ್ಲದೆ ರಸ್ತೆಯಲ್ಲಿ ಅತ್ಯಂತ ವೇಗವಾಗಿ ಹೋಗುತ್ತಿರುವ ವಾಹನದ ದೃಶ್ಯವನ್ನು ಕೆಲವರು ವಿಡಿಯೋ ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ಇದೀಗ ಈ ವಿಡಿಯೋ ವೈರಲ್ ಆಗುತ್ತಿದೆ. ಮುಂಭಾಗದ ಚಕ್ರಗಳಿಲ್ಲದೆ ಟ್ರಕ್ ಚಾಲನೆ ಮಾಡುತ್ತಿರುವ ಬಗ್ಗೆ ನೆಟ್ಟಿಗರು ಪ್ರತಿಕ್ರಿಯಿಸುತ್ತಿದ್ದಾರೆ. ನಮ್ಮ ದೇಶದಲ್ಲಿ ಮಾತ್ರ ಇಂತಹವುಗಳು ಸಾಧ್ಯ ಎಂದು ಕಾಮೆಂಟ್ ಮಾಡುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!