ದ್ವಿತೀಯ ಮಹಾಯುದ್ಧ ಕಾಲದ ಬಾಂಬ್‌ ಸ್ಫೋಟಿಸಿ ವ್ಯಕ್ತಿ ದುರ್ಮರಣ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ದ್ವಿತೀಯ ಮಹಾಯುದ್ಧ ಕಾಲಕ್ಕೆ ಸೇರಿದ ಬಾಬ್‌ ಸ್ಪೋಟಿಸಿ ವ್ಯಕ್ತಿಯೊಬ್ಬ ಸಾವನ್ನಪ್ಪಿದ ದುರಂತ ಘಟನೆ ಪೆರುಗ್ವೆಯಲ್ಲಿ ನಡೆದಿದೆ.
ಪೂರ್ವ ಜೆಕ್‌ನ ಓಸ್ಟ್ರಾವಾದಲ್ಲಿ ಘಟನೆ ನಡೆದಿದೆ. ಪುರಾತನ ವಸ್ತುಗಳ ಉತ್ಕನನ ಕಾರ್ಯ ನಡೆಸುತ್ತಿದ್ದ ಇಬ್ಬರು ವ್ಯಕ್ತಿಗಳಿಗೆ ಯಂತ್ರ ಮಾದರಿಯ ವಸ್ತುವೊಂದು ಸಿಕ್ಕಿದೆ. ಒರ್ವ ವ್ಯಕ್ತಿ ಆ ವಸ್ತುವನ್ನು ಹಳೆಯ ಒಳಚರಂಡಿ ಪೈಪ್ ಎಂದು ತಪ್ಪಾಗಿ ಭಾವಿಸಿ ವೆಲ್ಡರ್‌ ನಿಂದ ನಿಂದ ಕತ್ತರಿಸಲು ಪ್ರಯತ್ನಿಸಿದಾಗ ಬಾಂಬ್‌ ಸ್ಫೋಟಿಸಿದೆ. ಘಟನೆಯಲ್ಲಿ ಆತ ಮೃತಪಟ್ಟು, ಮತ್ತೊರ್ವ ತೀವ್ರವಾಗಿ ಗಾಯಗೊಂಡಿದ್ದಾನೆ. ಆನಂತರ ಪರಿಶೀಲನೆ ನಡೆಸಿದಾಗ ಅದು ದ್ವಿತೀಯ ಮಹಾಯುದ್ಧ ಕಾಲಕ್ಕೆ ಸೇರಿದ ಬಾಂಬ್‌ ಎಂಬುದು ತಿಳಿದುಬಂದಿದೆ ಎಂದು ಪೊಲೀಸ್ ವಕ್ತಾರ ಇವಾ ಮಿಚಲಿಕೋವಾ ತಿಳಿಸಿದ್ದಾರೆ.
ಘಟನೆಯಲ್ಲಿ 49 ವರ್ಷದ ವ್ಯಕ್ತಿ ಸಾವನ್ನಪ್ಪಿದ್ದು, 31 ವರ್ಷದ ವ್ಯಕ್ತಿಯ ತಲೆಗೆ ಪೆಟ್ಟುಬಿದ್ದಿದೆ ಎಂದು ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಸ್ಪೋಟ ನಡೆದ ಸ್ಥಳದಿಂದ 300 ಮೀಟರ್ ವ್ಯಾಪ್ತಿಯಲ್ಲಿರುವ ಮನೆಗಳಿಂದ ಸುಮಾರು 50 ಜನರನ್ನು ಸ್ಥಳಾಂತರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. 1939 ರಿಂದ 45 ರ ವರೆಗೆ ನಡೆದಿದ್ದ ದ್ವಿತೀಯ ಮಹಾಯುದ್ಧ ಕಾಲದಲ್ಲಿ ಹಿಟ್ಲರ್‌ ಸೈನ್ಯವು ಈ ಪ್ರದೇಶದಲ್ಲಿ ಅನೇಕ ದಾಳಿಗಳನ್ನು ಕೈಗೊಂಡಿತ್ತು.
ಪೆರಗ್ವೆ, ಈಶಾನ್ಯ ಜೆಕ್ ಗಣರಾಜ್ಯದಲ್ಲಿ ಯುದ್ಧಸಾಮಗ್ರಿ ಮತ್ತು ಬಾಂಬುಗಳು ಇಂದಿಗೂ ಹೆಚ್ಚಿನ ಪ್ರಮಾಣದಲ್ಲಿ ಪತ್ತೆಯಾಗುತ್ತವೆ. ಕಳೆದ ವರ್ಷವೂ ಈ ಪ್ರದೇಶದಲ್ಲಿ ಸಜೀವ ಬಾಂಬ್‌ ಒಂದು ಪತ್ತೆಯಾಗಿದ್ಗದರಿಂದ ನೂರಾರು ಜನರನ್ನು ಸ್ಥಳಾಂತರಿಸಲಾಗಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!