ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕುರಿಗಾಹಿಯ ಬರ್ಬರ ಹತ್ಯೆ

ಹೊಸದಿಗಂತ ವರದಿ, ಕಲಬುರಗಿ:

ಕುರಿಗಾಹಿಯ ಮೇಲೆ ಕಲ್ಲು ಎತ್ತಿ ಹಾಕಿ,ಬಬ೯ರವಾಗಿ ಹತ್ಯೆ ಮಾಡಿದ ಘಟನೆ ಕಲಬುರಗಿ ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯ ಚಿತ್ತಾಪುರ ತಾಲೂಕಿನ ಜಿವಣಗಿ ಗ್ರಾಮದ ಶಿವಪುತ್ರ (30) ಎಂಬಾತನೇ ಹತ್ಯೆಗಿಡಾದ ಯುವಕನಾಗಿದ್ದಾನೆ.
ಶಿವಪುತ್ರ ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ನಿವಾಸಿಯಾಗಿದ್ದು,ಕುರಿ ಮೇಯಿಸಿಕೊಂಡು ಯಾದಗಿರಿಯಿಂದ ಕಲಬುರಗಿ ಕಡೆಗೆ ಕುಟುಂಬ ಸಮೇತ ಬಂದಿದ್ದ. ಇವರ ಜೊತೆಗೆ ಯಾದಗಿರಿಯಿಂದ ಇನ್ನೋರ್ವ ಕುರಿಗಾಹಿ ಕುಟುಂಬ ಸಹಿತ ಬಂದಿದ್ದು,ಇಬ್ಬರು ಒಂದೆ ಊರಲ್ಲಿ ಕುರಿ ಮೇಯಿಸುವುದಕ್ಕೆ ಮುಂದಾಗಿದ್ದರು.
ಕುರಿ ಮೇಯಿಸುವ ವಿಚಾರದಲ್ಲಿ ಎರಡು ಕುಟುಂಬಗಳ ಮಧ್ಯೆ ಗಲಾಟೆ ಆಗಿದೆ. ಗಲಾಟೆ ವೇಳೆ ಶಿವಪುತ್ರನ ಮೇಲೆ ಕಲ್ಲು ಎತ್ತಿ ಹಾಕಿ ದುಷ್ಕರ್ಮಿಗಳು ಕೊಲೆ ಮಾಡಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಡಬೂಳ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!