Wednesday, February 8, 2023

Latest Posts

ಪಾಕ್‌, ಅಫ್ಘಾನಿಸ್ತಾನದ 4 ಉಗ್ರರನ್ನು ಜಾಗತಿಕ ಉಗ್ರರ ಪಟ್ಟಿಗೆ ಸೇರಿಸಿದ ಅಮೆರಿಕ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನದಲ್ಲಿ ಕಾರ್ಯನಿರ್ವಹಿಸುತ್ತಿರುವ ನಾಲ್ಕು ಪ್ರಮುಖ ಇಸ್ಲಾಮಿಕ್ ಉಗ್ರಗಾಮಿಗಳನ್ನು ಅಮೆರಿಕ ʼಜಾಗತಿಕ ಭಯೋತ್ಪಾದಕರʼ ಪಟ್ಟಿಗೆ ಸೇರಿಸಿದೆ.
ಈ ಉಗ್ರಗಾಮಿ ನಾಯಕರು ಪಾಕಿಸ್ತಾನದ ತಾಲಿಬಾನ್ ಮತ್ತು ದಕ್ಷಿಣ ಏಷ್ಯಾದ ಅಲ್-ಖೈದಾ ಶಾಖೆಗೆಸೇರಿದವರು.
ಈ ಎರಡೂ ಉಗ್ರಗಾಮಿ ಗುಂಪುಗಳು ಅಫ್ಘಾನಿಸ್ತಾನದಿಂದ ಕಾರ್ಯನಿರ್ವಹಿಸುತ್ತವೆ. ಆದರೆ ಅವು ಪಾಕಿಸ್ತಾನದ ವಾಯುವ್ಯ ಪರ್ವತ ಪ್ರದೇಶ  ಮತ್ತು ಇತರೆಡೆಗಳಲ್ಲಿ ಅಡಗುತಾಣಗಳನ್ನು ಹೊಂದಿವೆ. ತೆಹ್ರಿಕ್-ಎ-ತಾಲಿಬಾನ್ ಪಾಕಿಸ್ತಾನ ಅಥವಾ ಟಿಟಿಪಿ ಎಂದು ಕರೆಯಲ್ಪಡುವ ಪಾಕಿಸ್ತಾನದ ತಾಲಿಬಾನ್ ಚಳವಳಿಯು ಪಾಕಿಸ್ತಾನ ದೇಶಾದ್ಯಂತ ದಾಳಿಗಳನ್ನು ಪುನರಾರಂಭಿಸಿದ ಬಳಿಕ ಅಮೆರಿಕದ ವಿದೇಶಾಂಗ ಇಲಾಖೆಯ ಪ್ರಕಟಣೆ ಬಂದಿದೆ.
ಉಗ್ರರ ಬೆದರಿಕೆಯ ನಡುವೆ ಪಾಕಿಸ್ತಾನದ ಆಂತರಿಕ ಸಚಿವಾಲಯ ಶುಕ್ರವಾರ ಸಾರ್ವಜನಿಕ ಸ್ಥಳಗಳು ಮತ್ತು ಮಸೀದಿಗಳಲ್ಲಿ ಭದ್ರತೆಯನ್ನು ಬಿಗಿಗೊಳಿಸಿದೆ. ದೇಶಾದ್ಯಂತ ಭದ್ರತಾ ಪಡೆಗಳನ್ನು ಗುರಿಯಾಗಿಸಲು ಟಿಟಿಪಿ ತನ್ನ ಹೋರಾಟಗಾರರನ್ನು ಕೇಳಿದೆ. 2014ರಲ್ಲಿ ಪೇಶಾವರ ಶಾಲೆಯೊಂದರ ಮೇಲೆ 147 ಮಂದಿಯನ್ನು ಬಲಿತೆಗೆದುಕೊಂಡ ದಾಳಿಯ ಹಿಂದೆ ಈ ಉಗ್ರಗಾಮಿ ಸಂಘಟನೆಯ ಕೈವಾಡವಿತ್ತು.
“ಅಲ್-ಖೈದಾ (ಎಕ್ಯೂಐಎಸ್) ಮತ್ತು ತೆಹ್ರಿಕ್-ಇ ತಾಲಿಬಾನ್ ಪಾಕಿಸ್ತಾನ (ಟಿಟಿಪಿ) ಸೇರಿದಂತೆ ಅಫ್ಘಾನಿಸ್ತಾನದಲ್ಲಿ ಕಾರ್ಯಾಚರಿಸುತ್ತಿರುವ ಭಯೋತ್ಪಾದಕ ಗುಂಪುಗಳು ಅಮೆರಿಕಾವನ್ನು ಗುರಿಯಾಗಿಸಿಕೊಂಡಿದೆ. ಈ ಉಗ್ರಗಾಮಿಗಳನ್ನು ತಡೆಯಲು ಅಮೆರಿಕಾ ಕ್ರಮಕ್ಕೆ ಮುಂದಾಗಲಿದೆ ಎಂದು ವಿದೇಶಾಂಗ ಇಲಾಖೆ ತಿಳಿಸಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!