ಹೊಸದಿಗಂತ ಡಿಜಿಟಲ್ ಡೆಸ್ಕ್:
ರಸ್ತೆಯಲ್ಲಿ ಹೋಗುತ್ತಿದ್ದವರನ್ನು ಒಂದು ಕರಡಿ ಇದ್ದಕ್ಕಿದ್ದಂತೆ ಅವರನ್ನು ಹಿಂಬಾಲಿಸಲು ಶುರು ಮಾಡಿದೆ. ಅದರಿಂದ ತಪ್ಪಿಸಿಕೊಳ್ಳಲು ವ್ಯಕ್ತ ಮರವನ್ನೇರಿದರೂ ಬಿಡದೆ, ಸತಾಯಿಸಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಕೆಲವು ಪ್ರಕೃತಿ ಪ್ರೇಮಿಗಳು ಕಾಡು ಮತ್ತು ಬೆಟ್ಟಗಳಿಗೆ ವಿಹಾರಕ್ಕೆ ಹೋಗುತ್ತಾರೆ. ದುರದೃಷ್ಟವಶಾತ್, ವಿಹಾರಕ್ಕೆ ತೆರಳಿದ ವ್ಯಕ್ತಿಯ ಹಿಂದೆ ಕರಡಿ ಬೆನ್ನು ಬಿದ್ದಿದೆ. ಆತ ಪ್ರಾಣಭಯದಿಂದ ಓಡುತ್ತಾ ಮರಕ್ಕೆ ಹತ್ತಿದ್ದಾನೆ. ಕರಡಿ ಅವನನ್ನು ಅಲ್ಲೂ ಬಿಡದೆ ಅದೂ ಮರ ಹತ್ತುವ ಸಾರ್ವತ್ರಿಕ ಪ್ರಯತ್ನ ಮಾಡುತ್ತಾ ಕಾಲುಗಳನ್ನು ಹಿಡಿದು ಎಳೆಯಲು ಪ್ರಯತ್ನಿಸಿದೆ. ಅದರಿಂದ ಪಾರಾಗಲು ಅವನು ಏನೆಲ್ಲ ಮಾಡಿದ ಎಂಬುದನ್ನು ವರ್ಣಿಸಲು ಪದಗಳೇ ಸಾಲದು. ಏನೇ ಅಂದುಕೊಂಡರೂ ಕೊನೆಗೆ ಕರಡಿ ಅವನನ್ನು ಬಿಟ್ಟು ಹೋಗಿತ್ತು. ಆ ವ್ಯಕ್ತಿ ನೆಮ್ಮದಿಯ ನಿಟ್ಟುಸಿರು ಬಿಟ್ಟ. ಈ ಘಟನೆಯ ವಿಡಿಯೋ ನೆಟ್‌ನಲ್ಲಿ ವೈರಲ್ ಆಗುತ್ತಿದೆ.
Terrifying encounter between hiker and bear 😳 pic.twitter.com/WnryATSD86
— OddIy Terrifying (@OTerrifying) April 11, 2023