ಮಂಡ್ಯ : ಮದ್ದೂರು ತಾಲೂಕು ಹುಲಿಗೆರೆಪುರ ಗ್ರಾಮದಲ್ಲಿ ಮನೆಯೊಂದರ ಸಜ್ಜದ ಮೇಲೆ ನಿಂತು ಕೊಂಡೋತ್ಸವ ವೀಕ್ಷಿಸುತ್ತಿದ್ದ ವೇಳೆ ಸಜ್ಜ ಕುಸಿತು ಓರ್ವ ಮಹಿಳೆ ಸಾವನ್ನಪ್ಪಿ 36 ಮಂದಿ ಗಾಯಗೊಂಡಿರುವ ಘಟನೆ ಮುಂಜಾನೆ ನಡೆದಿದೆ.
ಗ್ರಾಮದ ಪುಟ್ಟಲಿಂಗಮ್ಮ (50) ಎಂಬುವರೇ ಸಾವನ್ನಪ್ಪಿದ ಮಹಿಳೆ. ಗ್ರಾಮದ 36 ಮಂದಿ ಗಾಯಗೊಂಡಿದ್ದಾರೆ.
ಗ್ರಾಮದ ಬಸವೇಶ್ವರ ದೇವಸ್ಥಾನದ ಕೊಂಡೋತ್ಸವ ಏರ್ಪಡಿಸಲಾಗಿತ್ತು. ಈ ವೇಳೆ ಮಾದೇಗೌಡರ ತಾರಸಿಗೆ 50ಕ್ಕೂ ಹೆಚ್ಚು ಮಂದಿ ಏರಿ ಕೊಂಡೋತ್ಸವ ವೀಕ್ಷಿಸುತ್ತಿದ್ದರು. ಹಠಾತ್ತನೆ ಸಜ್ಜ ಕುಸಿದು ಕೆಳಗೆ ಬಿದ್ದಿದ್ದಾರೆ.
ತಕ್ಷಣ ಎಲ್ಲ ಗಾಯಾಳುಗಳನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಯಿತು.