ಹೊಸದಿಗಂತ ಡಿಜಿಟಲ್ ಡೆಸ್ಕ್:
ಇದೀಗ ಮಾವಿನ ಹಣ್ಣಿನ ಸೀಸನ್. ಕಾಡು ಮಾವು ಯತೇಚ್ಛವಾಗಿ ಎಲ್ಲೆಡೆ ಸಿಗುತ್ತದೆ. ಈ ಮಾವಿನ ಹಣ್ಣಿನ ಹಸಿಗೊಜ್ಜು, ನೀರುಸಾರು, ಎಲ್ಲರಿಗೂ ರುಚಿ .ಹಾಗಾದ್ರೆ ಮಾಡೋಣ ಅಲ್ವೇ…
ಬೇಕಾಗುವ ಸಾಮಗ್ರಿ:
ಚೆನ್ನಾಗಿ ಹಣ್ಣಾದ ಕಾಡು ಮಾವಿನ ಹಣ್ಣು-5,
ಒಗ್ಗರಣೆಗೆ ಬೇಕಾದ ಸಾಮಗ್ರಿ,
ನೀರು, ಉಪ್ಪು, ಇಂಗು
ಹಸಿಮೆಣಸು
ಮಾಡುವ ವಿಧಾನ:
ಕಾಡು ಮಾವಿನ ಹಣ್ಣನ್ನು ಚೆನ್ನಾಗಿ ತೊಳೆದು ಸಿಪ್ಪೆ ಬೇರ್ಪಡಿಸಿ. ಒಂದು ಪಾತ್ರೆಯಲ್ಲಿ ಕುದಿಯಲು ನೀರಿಟ್ಟು, ಬೇರ್ಪಡಿಸಿದ ಹಣ್ಣನ್ನು ಹಾಕಿ ಬೇಯಿಸಿ. ಚಿಟಿಕೆ ಅರಶಿನ ಪುಡಿ, ಮೆಣಸಿನ ಪುಡಿ ಸೇರಿಸಿ. ರುಚಿಗೆ ತಕ್ಕಷ್ಟು ಉಪ್ಪು, ಒಂದು ದೊಡ್ಡ ಲಿಂಬೆಗಾತ್ರದಲ್ಲಿ ಬೆಲ್ಲ ಸೇರಿಸಿ ಕುದಿಸಿರಿ. ರುಚಿ ನೋಡಿ ಸಿಹಿ ಖಾರ ಸರಿಪಡಿಸಿಕೊಳ್ಳಿ. ಇಂಗು, ಬೇವಿನೆಲೆಯ ಒಗ್ಗರಣೆ ಕೊಡಿ. ಬಿಸಿ ಬಿಸಿ ಮಾವಿನ ಹಣ್ಣಿನ ಸಾರು ಬಲುರುಚಿ.