ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇಶದ ನೆಚ್ಚಿನ ಕಾರು ಮಾರಾಟಗಾರ ಕಂಪನಿಯಾದ ಮಾರುತಿ ಸುಜುಕಿಯು ಸೆಪ್ಟೆಂಬರ್ ತ್ರೈಮಾಸಿಕದಲ್ಲಿನ ಲಾಭದಲ್ಲಿ ನಾಲ್ಕು ಪಟ್ಟು ಜಿಗಿತವನ್ನು ದಾಖಲಿಸಿದೆ. ಕಳೆದ ವರ್ಷದ ಇದೇ ತ್ರೈಮಾಸಿಕದಲ್ಲಿ 475.30 ಕೋಟಿ ರೂ ಲಾಭಗಳಿಸಿದ್ದ ಕಂಪನಿಯು ಈ ವರ್ಷದಲ್ಲಿ 2,061.50 ಕೋಟಿ ರೂಪಾಯಿಗಳ ನಿವ್ವಳ ಲಾಭ ಗಳಿಸಿದೆ.
ಇದುವರೆಗಿನ ತ್ರೈಮಾಸಿಕ ಅವಧಿಯ ಮಾರಾಟದಲ್ಲೇ ಅತಿ ಹೆಚ್ಚು ಮಾರಾಟ ದಾಖಲಾಗಿದ್ದು 28,543.50 ಕೋಟಿ ರೂಪಾಯಿಗಳ ಮಾರಾಟವಾಗಿದೆ. ಇದು ಕಳೆದ ವರ್ಷದ ಇದೇ ತ್ರೈಮಾಸಿಕದಲ್ಲಿ 19,297.80 ಕೋಟಿ ರೂಪಾಯಿಗಳಷ್ಟಿತ್ತು. ಅಂದರೆ ವರ್ಷದಿಂದ ವರ್ಷಕ್ಕೆ (YoY)ಮಾರಾಟದಲ್ಲಿ 47.91ಶೇ. ದಷ್ಟು ಏರಿಕೆಯಾಗಿದೆ.
ಆಪರೇಟಿಂಗ್ EBIT ಕಳೆದ ವರ್ಷದ ತ್ರೈಮಾಸಿಕದಲ್ಲಿ ರೂ 98.80 ಕೋಟಿ ರುಪಾಯಿಯಿಂದ 2,046.30 ಕೋಟಿ ರೂ.ಗೆ ಏರಿಕೆಯಾಗಿದ್ದು 20.71 ಪಟ್ಟು ಹೆಚ್ಚಾಗಿದೆ ಎಂದು ಕಂಪನಿಯು ಎಕ್ಸ್ಚೇಂಜ್ ಫೈಲಿಂಗ್ನಲ್ಲಿ ತಿಳಿಸಿದೆ.