ಗರಿ ಗರಿಯಾದ ʻಉದ್ದಿನ ಬೇಳೆʼ ನಿಪ್ಪಟ್ಟು ಮಾಡಿ ನೋಡಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಬೇಕಾಗುವ ಪದಾರ್ಥಗಳು:

ಉದ್ದಿನಬೇಳೆ: 200 ಗ್ರಾಂ
ಅಕ್ಕಿ: 100 ಗ್ರಾಂ
ಒಣಮೆಣಸು: 5
ಇಂಗು: ಚಿಟಿಕೆ
ಮೆಣಸು: 5
ಜೀರಿಗೆ: 1 ಚಮಚ
ಕರಿಬೇವಿನ ಸೊಪ್ಪು: 2 ಎಸಳು
ಉಪ್ಪು: ಸಾಕಷ್ಟು,
ಎಣ್ಣೆ

ಮಾಡುವ ವಿಧಾನ:

ಮೊದಲು ಉದ್ದಿನಬೇಳೆ ಮತ್ತು ಅಕ್ಕಿಯನ್ನು ಪ್ರತ್ಯೇಕವಾಗಿ ಆರು ಗಂಟೆಗಳ ಕಾಲ ನೆನೆಸಿಡಿ. ನಂತರ ನೀರಿನಿಂದ ಹೊರತೆಗೆದು ಎರಡನ್ನೂ ಮಿಕ್ಸ್ ಮಾಡಿ, ಒಣಮೆಣಸು ಮತ್ತು ಮೆಣಸು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ. ಇದಕ್ಕೆ ಸಣ್ಣಗೆ ಹೆಚ್ಚಿದ ಕರಿಬೇವು, ಜೀರಿಗೆ, ಇಂಗು, ಉಪ್ಪು ಸೇರಿಸಿ ಸಣ್ಣ ಉಂಡೆಗಳನ್ನಾಗಿ ಮಾಡಿ ಪೂರಿ ಅಳತೆಯಲ್ಲಿ ಸ್ವಲ್ಪ ದಪ್ಪನಾಗಿ ಒತ್ತಿಕೊಳ್ಳಿ. ಈಗ ಎಣ್ಣೆಯಲ್ಲಿ ಹಾಕಿ ಗೋಲ್ಡನ್ ಕಲರ್‌ ಬರುವವರೆಗೆ ತೇಲಿಸಿ. ಗರಿಗರಿಯಾದ ಉದ್ದಿನಬೇಳೆ ನಿಪ್ಪಟ್ಟು ಸಿದ್ಧವಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!