ಬಾಗಲಕೋಟೆಯ ಯೋಗಥಾನ್‌ನಲ್ಲಿ ಕಂಡಿದ್ದು ಬರೋಬ್ಬರಿ 15 ಸಾವಿರ ಮಂದಿ!

ಹೊಸದಿಗಂತ ವರದಿ ಬಾಗಲಕೋಟೆ:

ಗಿನ್ನೀಸ್ ಬುಕ್ ಆಪ್ ರೆಕಾರ್ಡ್ಸ್ ದಾಖಲೆಗಾಗಿ ರಾಜ್ಯದ 31 ಜಿಲ್ಲೆಗಳಲ್ಲಿ ಏಕಕಾಲದಲ್ಲಿ ರವಿವಾರ ಹಮ್ಮಿಕೊಂಡ ಯೋಗಾಥಾನ್ ಕಾರ್ಯಕ್ರಮ ಬಾಗಲಕೋಟೆ ಜಿಲ್ಲೆಯಲ್ಲಿ ಯಶಸ್ಸು ಕಂಡಿತು.
ನಗರದ ಬಸವೇಶ್ವರ ವಿದ್ಯಾವರ್ಧಕ ಸಂಘದ ಮೈದಾನದಲ್ಲಿ ಜರುಗಿದ ಯೋಗಾಥಾನ್ ಕಾರ್ಯಕ್ರಮದಲ್ಲಿ 15 ಸಾವಿರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಸಾಮೂಹಿಕ ಯೋಗಾಭ್ಯಾಸದಲ್ಲಿ ಪಾಲ್ಗೊಂಡಿದ್ದರು. ಯೋಗಾಥಾನ್‍ದಲ್ಲಿ ತಾಡಾಸನ, ಪದ್ಮ ಹಸ್ತಾಸನ, ಅರ್ಧ ಚಕ್ರಾಸನ, ತ್ರೀಕೋನಾಸನ, ಭದ್ರಾಸನ, ಅರ್ಧ ಉಸ್ತ್ರಾಸನ, ವಕ್ರಾಸನ, ಭುಜಂಗಾಸನ, ಮಕರಾಸನ, ಪವನ ಮುಕ್ತಾಸನ, ಪ್ರಾಣಾಯಾಮ ಸೇರಿದಂತೆ 41 ಮಿನಿಷಗಳ ಕಾಲ 30 ಆಸನಗಳ ಅಭ್ಯಾಸ ಮಾಡಿಸಲಾಯಿತು.

ಕಾರ್ಯಕ್ರಮದಲ್ಲಿ ಒಂದು ಮುಖ್ಯ ವೇದಿಕೆ ಹಾಗೂ 20 ಮಿನಿ ವೇದಿಕೆಗಳನ್ನು ಹಾಕಲಾಗಿತ್ತು. ಪತಂಜಲಿ ಯೋಗ ಸಂಸ್ಥೆಯಿಂದ 84 ಯೋಗ ಬೋಧಕರು ಯೋಗಾಭ್ಯಾಸ ಮಾಡಿಸಿದರು. ಎನ್‍ಸಿಸಿ ಕೆಡೆಟ್ಸ್‍ಗಳನ್ನು ಸ್ಟೀವಡ್ರ್ಸ ಕರ್ತವ್ಯಕ್ಕಾಗಿ ನೇಮಿಸಿಲಾಗಿತ್ತು. ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗಿಮಿಸಿರುವ ಯೋಗಪಟುಗಳಿಗೆ 15 ಬ್ಯಾಕ್‍ಗಳನ್ನು ಮಾಡಿ ಕ್ಯೂಆರ್ ಕೋಡ್ ಸ್ಕ್ಯಾನ್‍ಗೆ ವ್ಯವಸ್ಥೆ ಅಧಿಕಾರಿ ಹಾಗೂ ಸಿಬ್ಬಂದಿಗಳನ್ನು ನೇಮಿಸಲಾಗಿತ್ತು. ಯೋಗಾಥಾನ್‍ದಲ್ಲಿ ನಗರದ ವಿವಿಧ ಶಾಲಾ-ಕಾಲೇಜು ವಿದ್ಯಾರ್ಥಿಗಳು, ವೈದ್ಯಕೀಯ, ನರ್ಸಿಂಗ್, ಫಾರ್ಮಸಿ ವಿದ್ಯಾರ್ಥಿಗಳ ಜೊತೆಗೆ ಸಾರ್ವಜನಿಕರು ಸಹ ಭಾಗವಹಿಸಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!