Thursday, December 8, 2022

Latest Posts

ಬಿಗ್ ಬಾಸ್ ಮನೆಯಲ್ಲಿ ಮ್ಯಾಚ್ ಫಿಕ್ಸಿಂಗ್?: ಆರ್ಯವರ್ಧನ್ ಗುರೂಜಿ ಮಾತಿಗೆ ಸುದೀಪ್ ಕೆಂಡಾಮಂಡಲ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಕನ್ನಡದ ಬಿಗ್ ಬಾಸ್ ಕಾರ್ಯಕ್ರಮ ಉತ್ತಮವಾಗಿ ಸಾಗುತ್ತಿದ್ದು, ಈಗಾಗಲೇ ಇಬ್ಬರು ಆಟಗಾರರರು ಮನೆಯಿಂದ ಹೊರಬಂದಿದ್ದಾರೆ.
ಇಂದು ಮತ್ತೊಬ್ಬ ಸ್ಪರ್ಧಿ ಹೊರಬರಲಿದ್ದು, ಇಂದು ನಡೆಯುವ ಸೂಪರ್ ಸಂಡೇ ವಿತ್ ಸುದೀಪ್ ಕಾರ್ಯಕ್ರಮದಲ್ಲಿ ನಟ ಕಿಚ್ಚ ಸುದೀಪ್ ಒಬ್ಬರನ್ನು ಹೊರ ಕರೆಯಲಿದ್ದಾರೆ.

ಇದರ ನಡುವೆ ಇಂದಿನ ಎಪಿಸೋಡ್ ನಲ್ಲಿ ಕಿಚ್ಚ ಸುದೀಪ್ ಕೆಂಡಾಮಂಡಲವಾಗಿದ್ದಾರೆ. ಅದಕ್ಕೆ ಕಾರಣ ಆರ್ಯವರ್ಧನ್ ಗುರೂಜಿ ಮಾತು..
ಹೌದು, ಇವತ್ತಿನ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಕಿಚ್ಚ ಸುದೀಪ್ , ಈ ಬಾರಿ ಟಾಪ್ 2 ನಲ್ಲಿ ಯಾರು ಇರ್ತಾರೆ ಎಂದು ಮೊದಲು ರಾಕೇಶ್ ಗೆ ಕೇಳಿದ್ರು. ಅದಕ್ಕೆ ಅವರು ಅರುಣ್ ಸಾಗರ್ ಎಂದು ಹೇಳ್ತಾರೆ.

ಅದೇ ಪ್ರಶ್ನೆಯನ್ನು ಗುರೂಜಿಗೆ ಸುದೀಪ್ ಅವರು ಕೇಳ್ತಾರೆ. ಆಗ ಗುರೂಜಿ ಅನುಪಮಾ ಅವರು. ಅನುಪಮಾ ಒಳಗೆ ಬರ್ಲಿ ಅನ್ನೋದು ಬಿಗ್ ಬಾಸ್‍ಗೆ ಆಸೆ ಇತ್ತು. ಎಷ್ಟು ಬಂಗಾರ ಇದೆ ಎಂದು ಗೊತ್ತಾದ ಮೇಲೆ ಒಳಗಡೆ ಕರೆಸುತ್ತಾರೆ ಎಂದ್ರೆ ಏನ್ ಅರ್ಥ ಎಂದು ಗುರೂಜಿ ಹೇಳ್ತಾರೆ.
ಗುರೂಜಿ ಹೇಳಿದ್ದನ್ನು ಕೇಳಿ ಅನುಪಮಾ ಗೌಡ ಸಹ ಶಾಕ್ ಆಗ್ತಾರೆ. ಅನುಪಮಾ ಗೆಲ್ಲಿಸಲು ಇದು ಮ್ಯಾಚ್ ಫಿಕ್ಸಿಂಗ್ ರೀತಿ ಇದೆ ಎಂದು ಆರ್ಯವರ್ಧನ್ ಗುರೂಜಿ ಹೇಳ್ತಾರೆ.

ಈ ಮಾತು ಕೇಳಿ ಕೋಪಗೊಂಡ ಸುದೀಪ್, ಹಾಗೆಲ್ಲಾ ಮಾತನಾಡಬೇಡಿ. ಮಾತು ಮೇಲೆ ನಿಗಾ ಇರಲಿ. ವಾಟ್ ಈಸ್ ದಟ್ ಮ್ಯಾಚ್ ಫಿಕ್ಸಿಂಗ್. ಅಲ್ಲಿ ಕೂತು ಆಡುವವರು ಏನ್ರಿ ಹಾಗಾದ್ರೆ ಎಂದು ಸುದೀಪ್ ಪ್ರಶ್ನೆ ಮಾಡ್ತಾರೆ.

ಬಿಗ್ ಬಾಸ್ ಮನೆಗೆ ಬಂದವರಿಗೆ ಯೋಗ್ಯತೆ ಇಲ್ವಾ? ಎಲ್ಲ ಮೋಸ ಮಾಡಿ ಆಡ್ತಾ ಇದ್ದಾರಾ? ಎಂದು ಸುದೀಪ್ ಕೇಳ್ತಾರೆ.
ಆಗ ಗುರೂಜಿ ನಾನ್ ಜನರಲ್ ಆಗಿ ಹೇಳಿದೆ ಎಂದು ಹೇಳ್ತಾರೆ. ಈ ಮಾತು ಸುದೀಪ್ ಅವರಿಗೆ ಮತ್ತಷ್ಟು ಕೋಪ ತರಿಸಿದ್ದು, ನಿಮ್ಮ ವ್ಯಕ್ತಿತ್ವದ ಬಗ್ಗೆ ಮಾತನಾಡಿದ್ರೆ ಇಷ್ಟು ಉದ್ದ ಹೇಳ್ತೀರಿ. ಈ ವೇದಿಕೆ ಮರ್ಯಾದೆ ತೆಗೆದ್ರೆ, ಸತ್ಯವಾಗಲೂ ಹೇಳ್ತಿನಿ, ನಮಗೂ,ನಿಮಗೂ ಬೀಳುತ್ತೆ ಎಂದು ಸುದೀಪ್, ಆರ್ಯವರ್ಧನ್ ಗುರೂಜಿಗೆ ವಾರ್ನ್ ಮಾಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!