ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜಕಾರಣದಲ್ಲಿ ಏನು ಬೇಕಾದರೂ ಆಗುತ್ತದೆ. ಇಲ್ಲಿ ಯಾವತ್ತೂ ಮೆಥಾಮೆಟಿಕ್ಸ್ ಅಪ್ಲೈ ಆಗಲ್ಲ. ಏನೇ ಇದ್ದರೂ ಅದು ಕೆಮಿಷ್ಟ್ರಿ, ಟು ಪ್ಲಸ್ ಟು ಫೋರ್ ಆಗಬಹುದು. ಟೆನ್ ಕೂಡ ಆಗಬಹುದು ಎಂದು ಮಾಜಿ ಸಚಿವ ಮುರುಗೇಶ್ ನಿರಾಣಿ ಹೇಳಿದ್ದಾರೆ.
ಡಿ.ಕೆ.ಶಿವಕುಮಾರ್ ಬಿಜೆಪಿಗೆ ಬರ್ತಾರಾ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿ, ಡಿಕೆಶಿ ಬಿಜೆಪಿಗೆ ಬರುವುದು ನಮ್ಮ ನಡುವೆ ಇಲ್ಲ. ಇಂತಹ ವಿಚಾರ ನಾಲ್ಕು ಗೋಡೆ ಮಧ್ಯೆ ನಡೆಯುತ್ತದೆ. ನಮ್ಮ ಪಕ್ಷದಲ್ಲಿ ಏನಾದರೂ ಕೆಲಸ ಬೇಕಾದರೆ ನಾವು ಬೇರೆ ಬೇರೆ ಸಚಿವರು, ಶಾಸಕರನ್ನು ಭೇಟಿಯಾಗುತ್ತಿರುತ್ತೇವೆ. ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಇದೆ. ಬೇರೆ ಪಕ್ಷದವರು ಆಯಾ ಇಲಾಖೆಯ ಕೆಲಸದ ನಿಮಿತ್ತ ಕೇಂದ್ರ ಸಚಿವರನ್ನು ಭೇಟಿಯಾಗಿರಬಹುದು. ದೆಹಲಿಗೆ ಹೋಗಿ ಭೇಟಿಯಾಗೋದು ಸರ್ವೇ ಸಾಮಾನ್ಯ. ಆ ರೀತಿ ಅವರೂ ಭೇಟಿಯಾಗಿರಬಹುದು ಎಂದರು.