ಎಸ್ಸೆಸ್ಸೆಲ್ಸಿ ರಿಸೆಲ್ಟ್:‌ ಶಿರಸಿಯ ಸರ್ಕಾರಿ ಪ್ರೌಢಶಾಲೆಗೆ ಪ್ರಥಮ, ದ್ವಿತೀಯ ರ‍್ಯಾಂಕ್‌

ಹೊಸದಿಗಂತ ವರದಿ, ಶಿರಸಿ
ಇಲ್ಲಿನ ಮಾರಿಕಾಂಬಾ ಸರಕಾರಿ ಪ್ರೌಢಶಾಲೆಗೆ ರಾಜ್ಯಕ್ಕೆ ಮೊದಲ ಎರಡು ರ‍್ಯಾಂಕ್‌ ಬಂದಿದ್ದು, ಇಲ್ಲಿನ ವಿದ್ಯಾರ್ಥಿ ಚಿರಾಗ ಮಹೇಶ ನಾಯ್ಕ ಪ್ರಥಮ ಸ್ಥಾನಗಳಿಸಿದ್ದಾನೆ.
ಚಿರಾಗ ಮಹೇಶ ನಾಯ್ಕ 625 ಕ್ಕೆ 625 ಅಂಕ ಪಡೆದು ಸಾಧನೆ ತೋರಿದ್ದಾನೆ. ಚಿರಾಗ ಮಾರಿಕಾಂಬಾ ಪ್ರೌಢಶಾಲೆಯಲ್ಲಿ ಶಿಕ್ಷಕರಾದ ಮಹೇಶ ನಾಯ್ಕ ಹಾಗೂ ಹೇಮಾವತಿ ನಾಯ್ಕ ಅವರ ಪುತ್ರನಾಗಿದ್ದಾನೆ.
ಮಾರಿಕಾಂಬಾ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ದೀಕ್ಷಾ ರಾಜು ನಾಯ್ಕ 624 ಅಂಕ ಪಡೆಯುವ ಮೂಲಕ ರಾಜ್ಯಕ್ಕೆ ದ್ವಿತೀಯ ರ್ಯಾಂಕ್ ಪಡೆದಿದ್ದಾಳೆ. ದೀಕ್ಷಾ ಅವರ ತಂದೆ ರಾಜು ನಾಯ್ಕ ಪೇಂಟರ್ ಆಗಿ ಉದ್ಯೋಗ ಮಾಡುತ್ತಿದ್ದಾರೆ. ಈ ವಿದ್ಯಾರ್ಥಿಗಳ ಸಾಧನೆಗೆ ಮಾರಿಕಾಂಬಾ ಪ್ರೌಢಶಾಲೆಯ ಮುಖ್ಯೋಪದ್ಯಾಯ ನಾಗರಾಜ ನಾಯ್ಕ ಅಭಿನಂದನೆ ಸಲ್ಲಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!