ಮೇ 21, 22 ರಂದು ಚಿಕ್ಕೋಡಿಯಲ್ಲಿ ಭಾವಿ ಶಿಕ್ಷಕರ ನೇಮಕಾತಿ ಪರೀಕ್ಷೆ

ಹೊಸದಿಗಂತ ವರದಿ, ಚಿಕ್ಕೋಡಿ:

ಚಿಕ್ಕೋಡಿ- ರಾಜ್ಯದಲ್ಲಿ ಶೈಕ್ಷಣಿಕ ಜಿಲ್ಲೆಯೆಂದೇ ವಿಶೇಷ ಛಾಪು ಮೂಡಿಸಿರುವ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ ಅಭ್ಯರ್ಥಿಗಳು ಪರೀಕ್ಷೆ ಎದುರಿಸಲಿದ್ದು, ಮೇ 21 ಹಾಗು 22 ರಂದು ಎರಡು ದಿನಗಳ ಕಾಲ ನಡೆಯುವ ಭಾವಿ ಶಿಕ್ಷಕರ ನೇಮಕಾತಿ ಪರಿಕ್ಷೆಯ
ರಾಜ್ಯದಲ್ಲಿ ಅತಿ ಹೆಚ್ಚು ಅರ್ಜಿ ಗಳು ಅಭ್ಯರ್ಥಿಗಳು‌ ಚಿಕ್ಕೋಡಿಗೆ ಸಲ್ಲಿಸಿದ್ದು, 1271 ಶಿಕ್ಷಕರ ಸ್ಥಾನಗಳಿಗೆ 11,199 ಅಭ್ಯರ್ಥಿಗಳು ಪರಿಕ್ಷೆ ಬರೆಯಲಿದ್ದಾರೆ.

ಶೈಕ್ಷಣಿಕ ಜಿಲ್ಲೆ ಚಿಕ್ಕೋಡಿ ಸೇರಿ ವಿವಿಧ ಎಡೆ ಒಟ್ಟು 37 ಪರಿಕ್ಷಾಕೇಂದ್ರಗಳ ಪರಿಕ್ಷೆಗೆ ಸಜ್ಜುಗೊಂಡಿದ್ದು, ಚಿಕ್ಕೋಡಿ 17 ಕೇಂದ್ರಗಳು, ನಿಪ್ಪಾಣಿ ಯಲ್ಲಿ 10ಕೇಂದ್ರಗಳಲ್ಲಿ, ಅಂಕಲಿ ಗ್ರಾಮದಲ್ಲಿ 4 ಕೇಂದ್ರಗಳು , ನನದಿ ಮತ್ತು ಎಕ್ಸಂಬಾ ಸೇರಿ 4 ಕೇಂದ್ರಗಳು, ಮಜಲಟ್ಟಿಯ 4 ಕೇಂದ್ರಗಳಲ್ಲಿ ಅಭ್ಯರ್ಥಿಪರಿಕ್ಷೆ ಎದುರಿಸಲಿದ್ದಾರೆ. ಪೋಲಿಸ್ ಸಹಾಯದೊಂದಿಗೆ ಪ್ರಿಸ್ಕ್ರಿಂ ಗೆ ದೈಹಿಕ ಶಿಕ್ಷಕರನ್ನು ನೇಮಿಸಲಾಗಿದ್ದು
ಜಿಲ್ಲಾಡಳಿತ ದಿಂದ ಗುರುತಿಸಲಾದೆ. ಪರೀಕ್ಷಾ ಕೇಂದ್ರ 200 ಮೀಟರ್ ವ್ಯಾಪ್ತಿಯಲ್ಲಿ 144 ಸೆಕ್ಷನ್ ಮಾಡಲಾಗಿದೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ನೀಡಿದ ಮೆಟಲ್ ಡಿಟೆಕ್ಟರ್ ಸಹಾಯದೊಂದಿಗೆ ಅಭ್ಯರ್ಥಿಗಳನ್ನು ತಪಾಸಣೆಗೊಳಪಡಿಸಿ ಕ್ರಮವಹಿಸಲಾಗಿದೆ.

ಟ್ರೀಂ ಆ್ಯಂಡ್ ಕಮೀಟಿ ಮೇಂಬರ್ ಎ.ಸಿ .ಡಿಡಿಪಿಅಯ್, ಟ್ರೇಜರಿ ಆಪೀಸರ್ ಮಾರ್ಗದರ್ಶನದಲ್ಲಿ ಸ್ಥಳಿಯವಾಗಿ ಪರಿಕ್ಷೇ ನಡೆಯಲು ಚಿಕ್ಕೋಡಿ ಸಜ್ಜಾಗಿದೆ.ತಲಾ ಪರಿಕ್ಷಾ ಕೇಂದ್ರಕ್ಕೆ 4 ಪೋಲಿಸ್‌ ಸಿಬ್ಬಂದಿ, 2 ಆಶಾಕಾರ್ಯಕರ್ತೇಯರು , 2 ದೈಹಿಕ ಶಿಕ್ಷಕರನ್ನು , 2 ಬಿಸಿ ಊಟದ ಸಿಬ್ಬಂದಿ ಪ್ರಿಸ್ಕ್ರಿಂ ಗೆ ನೇಮಿಸಲಾಗಿದೆ. ಇನ್ನುಳಿದಂತೆ ಆರೋಗ್ಯ ಸಿಬ್ಬಂದಿ, ಸೇರಿ ಸ್ಥಳೀಯ ನೀಡಲ್ ಅದಿಕಾರಿ, ಪರಿಕ್ಷಾ ಮೇಲ್ವಿಚಾರಕರಾಗಿ ಹಲವು ಸಿಬ್ಬಂದಿಗಳು ಕಾರ್ಯ ನಿರ್ವಹಿಸಲಿದ್ದಾರೆ.

ಚಿಕ್ಕೋಡಿ ಕೇಂದ್ರ ಬಸ್ ನಿಲ್ದಾಣ ಕೆ.ಎಸ್.ಆರ್.ಟಿ.ಸಿ ಇಂದ ಸೂಕ್ತ ಬಸ್ ವಿದ್ಯಾರ್ಥಿ ಗಳಿಗೆ ಪರಿಕ್ಷಾ ಕೇಂದ್ರದ ವರೆಗು ತೆರಳಲು ವ್ಯವಸ್ಥೆ ಕಲ್ಪಿಸಲಾಗಿದೆ. ಹೆಚ್ಚಿನ ಮಾಹಿತಿಗೆ ಅಭ್ಯರ್ಥಿಗಳಿಗೆ ಇಲಾಖೆಯಿಂದ ಆರಂಬಿಸಲಾದ ಸಹಾಯವಾಣಿ ಸಂಖ್ಯೆ 8763510800 ಕರೆ ಮಾಡಿ ಮಾಹಿತಿ ಪಡೆಯಬಹುದಾಗಿದೆ.

ಜಿಲ್ಲಾಧಿಕಾರಿ, ಎಸ್.ಪಿ, ಜಿಲ್ಲಾ.ಪಂ ಅಧಿಕಾರಿಗಳ ಮಾರ್ಗದರ್ಶನದೊಂದಿಗೆ ಸಕಲ ಸಿದ್ಧತೆ ಮಾಡಲಾಗಿದ್ದು, ಬಸ್ ನಿಲ್ದಾಣ ಅಭ್ಯರ್ಥಿ ‌ಅನೂಕುಲಕ್ಕಾಗಿ ಸಹಾಯ ಕೇಂದ್ರ ಆರಂಬಿಸಲಾಗಿದ್ದು, ಜಿಲ್ಲಾಅಧಿಕಾರಿಗಳ ಮಾರ್ಗದರ್ಶನದಲ್ಲಿ ಹಾಸ್ಟೇಲ್ ಗಳನ್ನು ಗುರುತಿಸಿ ವಾಟ್ಸ ಆ್ಯಪ್ ಮೂಲಕ ಪಟ್ಟಿ ಹರಿಬಿಡಲಾಗಿದೆ.ಉಳಿಯಲು ಅಲ್ಲಿ ಅವಕಾಶ ಅನುಸಾಯ ಕಲ್ಪಿಸಿಕೊಡಲಾಗಿದೆ ಎಂದು ನೋಡಲ್ ಅಧಿಕಾರಿ, ಎ.ಸಿ ಗಂಗಾಧರ ಮಾಹಿತಿ ನೀಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!