ಕಾಶಿಯನ್ನು ಔರಂಗಜೇಬ ನಾಮಾವಶೇಷ ಮಾಡಿದ್ದನೇಕೆ? ದಾಖಲೆಗಳು ಏನು ಹೇಳುತ್ತವೆ ಓದಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಬಹುಚರ್ಚಿತ ಜ್ಞಾನವಾಪಿ ಮಸೀದಿಯ ಹಿಂದಿನ ಸತ್ಯಗಳು ಒಂದೊಂದಾಗಿ ಹೊರಬರುತ್ತಿದೆ. ಆ ಜಾಗದಲ್ಲಿ ಇರುವ ದೇವಾಲಯವನ್ನು ಒಡೆದು ಮಸೀದಿ ಕಟ್ಟಲಾಗಿದೆ ಎಂಬುದಕ್ಕೆ ಪುಷ್ಟಿ ಕೊಡುವ ದಾಖಲೆಗಳಿವೆ

ಔರಂಗಜೇಬನ ಆಳ್ವಿಕೆಯ ಕುರಿತಾಗಿ ಸಾಕಿ ಮುಸ್ತೈದ್ ಖಾನ್ ಬರೆದಿರುವ ʼಮಾಸಿರ್-ಇ-ಆಲಂಗಿರಿʼಯಲ್ಲಿ ದೇವಾಲಯದ ವಿನಾಶದ ಕುರಿತು ಉಲ್ಲೇಖಿಸಲಾಗಿದೆ. ಈ ಪುಸ್ತಕದ ಮೊದಲ ಭಾಗವನ್ನು ಔರಂಗ ಜೇಬ ಜೀವಂತವಾಗಿದ್ದಾಗಲೇ ಬರೆಯಲಾಗಿದ್ದು ಉಳಿದವುಗಳನ್ನು ಅವನ ಮರಣಾನಂತರ ಬರೆಯಲಾಗಿದೆ. ಪರ್ಯಷಿನ್‌ ಭಾಷೆಯಲ್ಲಿ ಬರೆದುಕೊಂಡಿರುವ ಈ ಪುಸ್ತಕವನ್ನು ಬ್ರಿಟಿಷರ ಕಾಲದಲ್ಲಿ ಇತಿಹಾಸಕಾರ ಜಾದುನಾಥ್ ಸರ್ಕಾರ್ ಅನುವಾದಿಸಿದ್ದಾರೆ.

ಹೀಗೆನ್ನುತ್ತದೆ ಪುಸ್ತಕ:
ಈ ಪುಸ್ತಕದ ಪ್ರಕಾರ ಏಪ್ರಿಲ್‌ 8,1669ರಂದು ಚಕ್ರವರ್ತಿ(ಔರಂಗಜೇಬ)ಯು ಬನಾರಸ್ ನಲ್ಲಿ (ವಾರಾಣಸಿ)ಯಲ್ಲಿ ಕೆಲವು “ನಂಬಿಕೆಯಿಲ್ಲದವರು (ಕಾಫೀರರು)” ತಮ್ಮ ಸುಳ್ಳು ಗಳನ್ನು ಬೋಧಿಸುತ್ತಿರುವ ಬಗ್ಗೆ ತಿಳಿದುಕೊಂಡನು.

“ಟೆಟ್ಟಾ, ಮುಲ್ತಾನ್‌ ಮತ್ತು ವಿಶೇಷವಾಗಿ ಬನಾರಸ್‌ ಪ್ರಾಂತ್ಯಗಳಲ್ಲಿ ನಂಬಿಕೆಯಿಲ್ಲದ ಬ್ರಾಹ್ಮಣರು ಶಾಲೆಗಳನ್ನು ಸ್ಥಾಪಿಸಿ ತಮ್ಮ ಸುಳ್ಳು ಪುಸ್ತಕಗಳನ್ನು ಕಲಿಸುತ್ತಿದ್ದರು. ಈ ದಾರಿತಪ್ಪಿದ ಪುರುಷರ ಬಳಿ ಕೆಟ್ಟ ಕಲಿಕೆಯನ್ನು ಪಡೆಯಲು ಅವರ ಅಭಿಮಾನಿಗಳಾದ ಹಿಂದು, ಮತ್ತು ಮುಸಲ್ಮಾನ ವಿದ್ಯಾರ್ಥಿಗಳು ಬಹಳ ದೂರದಿಂದ ಇಲ್ಲಿಗೆ ಬರುತ್ತಿದ್ದರು ಎಂದು ಪ್ರಭುವಿಗೆ ತಿಳಿಯಿತು” ಎಂದು ಒಂದು ಭಾಗ ಹೇಳುತ್ತದೆ.

ಅದೇರೀತಿ ಪುಸ್ತಕದ ಇನ್ನೊಂದು ಭಾಗದಲ್ಲಿ “ಇಸ್ಲಾಂ ಧರ್ಮವನ್ನು ಸ್ಥಾಪಿಸಲು ಉತ್ಸುಕರಾಗಿರುವ ಮಹಾಮಹಿಮರು ನಾಸ್ತಿಕರ ಶಾಲೆಗಳು ಮತ್ತು ದೇವಾಲಯವನ್ನು ಕೆಡವಲು ಮತ್ತು ಈ ಅಪನಂಬಿಗಸ್ಥರ ಧರ್ಮದ ಬೊಧನೆಗಳು ಮತ್ತು ಸಾರ್ವಜನಿಕ ಆಚರಣೆಗಳನ್ನು ಕೆಳಗಿಳಿಸಲು ಎಲ್ಲಾ ಪ್ರಾಂತ್ಯದ ಗವರ್ನರ್‌ ಗಳಿಗೆ ಆದೇಶಿಸಿದರು” ಎಂದು ಹೇಳಲಾಗಿದೆ. ಈ ಆದೇಶದಂತೆ ಸೆಪ್ಟೆಂಬರ್‌ 2, 1669ರಂದು ಚಕ್ರವರ್ತಿಯ ಆಜ್ಞೆಯ ಪ್ರಕಾರ ಅವನ ಅಧಿಕಾರಿಗಳು ವಾರಣಾಸಿಯಲ್ಲಿರುವ ವಿಶ್ವನಾಥನ ದೇವಾಲಯವನ್ನು ಕೆಡವಿದರು ಎಂದು ಪುಸ್ತಕವು ಉಲ್ಲೇಖಿಸುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!