ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಭಾರತಕ್ಕೆ ಶಾಶ್ವತ ಸದಸ್ಯತ್ವ ಸಿಗಲಿ: ಫ್ರಾನ್ಸ್‌ ಆಗ್ರಹ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತಕ್ಕೆ ಖಾಯಂ ಸ್ಥಾನ ಸಿಗಬೇಕು ಎಂದು ಫ್ರಾನ್ಸ್ ಮತ್ತೊಮ್ಮೆ ಆಗ್ರಹಿಸಿದೆ. ಜೊತೆಗೆ ಭದ್ರತಾ ಮಂಡಳಿ ಇನ್ನಷ್ಟು ವಿಸ್ತರಣೆ ಆಗಬೇಕು ಎಂದಿರುವ ಫ್ರಾನ್ಸ್‌, ಅಲ್ಲಿ ಭಾರತದ ಜೊತೆಗೆ ಜರ್ಮನಿ, ಬ್ರೆಜಿಲ್, ಭಾರತ ಮತ್ತು ಜಪಾನ್ ಗೂ ಖಾಯಂ ಸದಸ್ಯತ್ವ ಸಿಗಬೇಕು ಎಂದು ಒತ್ತಾಯಿಸಿದೆ.
ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಆಫ್ರಿಕನ್ ದೇಶಗಳಿಗೂ ಸ್ಥಾನ ಸಿಗುವುದನ್ನು ನೋಡಲು ನಾವು ಬಯಸುತ್ತೇವೆ. ಕೌನ್ಸಿಲ್ ತನ್ನ ಅಧಿಕಾರ ಮತ್ತು ಪರಿಣಾಮಕಾರಿತ್ವವನ್ನು ಮತ್ತಷ್ಟು ಬಲಪಡಿಸುವ ರೀತಿಯಲ್ಲಿ ಪ್ರಪಂಚದ ಉದಯೋನ್ಮುಖ ರಾಷ್ಟ್ರಗಳಿಗೆ ಹೆಚ್ಚು ಪ್ರತಿನಿಧ್ಯ ಸಿಗಬೇಕೆಂದು ನಾವು ಬಯಸುತ್ತೇವೆ” ಎಂದು ವಿಶ್ವಸಂಸ್ಥೆಯಲ್ಲಿ ಫ್ರಾನ್ಸ್‌ನ ಖಾಯಂ ಉಪ ಪ್ರತಿನಿಧಿ ನಥಾಲಿ ಬ್ರಾಡ್‌ಹರ್ಸ್ಟ್ ಹೇಳಿದ್ದಾರೆ.
“ಖಾಯಂ ಸದಸ್ಯತ್ವಕ್ಕೆ ಪ್ರಮುಖವಾಗಿ ಭಾರತದ ಉಮೇದುವಾರಿಕೆಯನ್ನು ಫ್ರಾನ್ಸ್ ಬೆಂಬಲಿಸುತ್ತದೆ. ಸಮಾನ ಭೌಗೋಳಿಕ ಪ್ರಾತಿನಿಧ್ಯವನ್ನು ಸಾಧಿಸಲು ಪ್ರವರ್ಧಮಾನಕ್ಕೆ ಬರುತ್ತಿರುವ ರಾಷ್ಟ್ರಗಳಿಗೂ ಖಾಯಂ ಸ್ಥಾನಗಳನ್ನು ಹಂಚಬೇಕು” ಎಂದು ಫ್ರಾನ್ಸ್‌ ಕರೆನೀಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!