ದಿಲ್ಲಿ ರಿಸೆಲ್ಟ್: ಅಧಿಕಾರಕ್ಕೇರಿದ ಆಪ್: ಬಿಜೆಪಿಯ 15 ವರ್ಷಗಳ ಆಡಳಿತ ಅಂತ್ಯ

ಹೊಸದಿಗಂತ ಡಿಜಿಟಲ್‌ ಡೆಸ್ಕ್
ದೆಹಲಿ ಪಾಲಿಕೆ ಚುನಾವಣೆಯಲ್ಲಿ ಆಮ್‌ ಆದ್ಮಿ ಪಕ್ಷ ಜಯಬೇರಿ ಭಾರಿಸಿದ್ದು, ಬಿಜೆಪಿಯ 15 ವರ್ಷಗಳ ಆಡಳಿತವನ್ನು ಕೊನೆಗೊಳಿಸಿದೆ.
ರಾಜ್ಯ ಚುನಾವಣಾ ಆಯೋಗವು ಘೋಷಿಸಿದ ಅಂತಿಮ ಫಲಿತಾಂಶದಲ್ಲಿ 250 ವಾರ್ಡ್‌ಗಳಲ್ಲಿ 134 ಸ್ಥಾನಗಳನ್ನು ಆಪ್ ಗೆದ್ದಿದೆ. ಮ್ಯಾಜಿಕ್‌ ನಂಬರ್‌ 126 ಮೀರಿದ ಆಪ್‌ ಸ್ವತಂತ್ರ್ಯ ಪಕ್ಷವಾಗಿ ಪಾಲಿಕೆ ಆಡಳಿತ ನಡೆಸಲಿದೆ. ಬಿಜೆಪಿ ಉತ್ಸಾಹಭರಿತ ಹೋರಾಟ ನಡೆಸಿತಾದರೂ 104 ಸ್ಥಾನಗಳಿಗೆ ತೃಪ್ತಿಪಟ್ಟಿಕೊಂಡಿತು. ಕಾಂಗ್ರೆಸ್ ಒಂಬತ್ತು ಮತ್ತು ಮೂವರು ಸ್ವತಂತ್ರ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ.
ʼಸ್ಥಾಪನೆಯಾದ ಕೇವಲ 10 ವರ್ಷಗಳಲ್ಲಿ ಎಎಪಿ ಪಕ್ಷವು ದೇಶದ ಅತಿದೊಡ್ಡ ಪಕ್ಷವನ್ನು (ಬಿಜೆಪಿ) ಅದರ ಭದ್ರಕೋಟೆಯಲ್ಲಿ ಸೋಲಿಸಲು ಯಶಸ್ವಿಯಾಗಿದೆʼ ಎಂದು ಎಎಪಿ ರಾಜ್ಯಸಭಾ ಸಂಸದ ಸಂಜಯ್ ಸಿಂಗ್ ಹೇಳಿದ್ದಾರೆ. ʼ15 ವರ್ಷಗಳ ಆಡಳಿತ ವಿರೋಧಿ ಅಲೆ ಹೊರತಾಗಿಯೂ ನಮ್ಮ ಕಾರ್ಯಕ್ಷಮತೆ ಉತ್ತಮವಾಗಿತ್ತು. ನಾವು ದೆಹಲಿಯ ಜನರಿಗಾಗಿ ಮುನ್ಸಿಪಲ್ ಕಾರ್ಪೊರೇಷನ್‌ಗಳಲ್ಲಿ ಕೆಲಸ ಮಾಡಿದ್ದೇವೆ. ಆದರೆ ಕೆಲವರು ಸಂತೋಷವಾಗಿರಲಿಲ್ಲ, ಆದರೆ ಬಿಜೆಪಿ ವಿರುದ್ಧ ಯಾವುದೇ ಕೋಪ ಇರಲಿಲ್ಲʼ ಎಂದು ದೆಹಲಿ ಬಿಜೆಪಿ ಅಧ್ಯಕ್ಷ ಆದೇಶ್ ಗುಪ್ತಾ ಸೋಲಿನ ವಿಶ್ಲೇಷಣೆ ಮಾಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!