ಅಕಾ ಗಳ ಸಾರ್ವಭೌಮತ್ವ ರಕ್ಷಣೆಗಾಗಿ ಬ್ರಿಟೀಷರ ವಿರುದ್ಧ ಸಿಡಿದುನಿಂತಿದ್ದ ಮೇಧಿ ರಾಜ

ಹೊಸಗಂತ ಡಿಜಿಟಲ್‌ ಡೆಸ್ಕ್( ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವದ ವಿಶೇಷ)
ಮೇಧಿ ರಾಜನು ಅಕಾ ಸಮುದಾಯದ ಇತಿಹಾಸದಲ್ಲಿ ಪ್ರಮುಖ ವ್ಯಕ್ತಿಯಾಗಿದ್ದಾನೆ. 1883-1884ರಲ್ಲಿ ಸಂಭವಿಸಿದ ಆಂಗ್ಲೋ- ಅಕಾ ಯುದ್ಧದಲ್ಲಿ ಬ್ರಿಟೀಷರನ್ನು ಕಂಗೆಡಿಸಿ ಆ ಭಾಗದ ಜನರ ಗೌರವಾಧಾರಗಳಿಗೆ ಪಾತ್ರನಾದನು. ಕಪಾಶ್ಚೋರ್ ಅಕಾಸ್ ಎಂದೂ ಕರೆಯಲ್ಪಡುವ ಅರುಣಾಚಲ ಪ್ರದೇಶದ ಅಕಾಸ್‌ನ ಕುವಾಟ್ಸನ್ ಗುಂಪಿಗೆ ಮೇಧಿ ರಾಜನು ನಾಯಕನಾಡಿದ್ದ. ನೈಟ್ರಿಡಾ ನಗರದಿಂದ ಆತ ಆಡಳಿತ ನಡೆಸುತ್ತಿದ್ದ. ತಾಗಿ ರಾಜನ ಹಿರಿಯ ಮಗನಾಗಿದ್ದ ಮೇಧಿರಾಜ 1873 ರಲ್ಲಿ ಅಕಾಗಳ ನಾಯಕನಾಗಿ ಅಧಿಕಾರ ಸ್ವೀಕರಿಸಿದ. ಅವನ ನಿರರ್ಗಳ ಮಾತು, ಅಸಾಧಾರಣ ಬುದ್ಧಿವಂತಿಕೆಗಳನ್ನು ಬ್ರಿಟೀಷ್‌ ಅಧಿಕಾರಿಗಳು ಸಹ ಮೆಚ್ಚಿದ್ದರು. ಅವನನ್ನು ಉನ್ನತ ಮನಸ್ಸಿನ ವ್ಯಕ್ತಿ ಎಂದು ಹಲವಾರು ದಾಖಲೆಗಳಲ್ಲಿ ವಿವರಿಸಲಾಗಿದೆ.
ಅಕಾಗಳ ಹಿತಾಸಕ್ತಿ ರಕ್ಷಣೆ ಹಾಗೂ ಭದ್ರತೆಯ ವಿಚಾರದಲ್ಲಿ ಬ್ರಿಟೀಷರಿಂದ ಸಮಸ್ಯೆ ಎದುರಾಗುತ್ತಿರುವುದನ್ನು ಮನಗಂಡ ಮೇದಿರಾಜ ವಿದೇಶಿ ಆಕ್ರಮಣಕಾರರ ವಿರುದ್ಧ ಬಂಡಾಯವೆದ್ದ. 1883-84ರಲ್ಲಿ ಬ್ರಿಟಿಷರು ಮತ್ತು ಅಕಾಗಳ ನಡುವೆ ಆಂಗ್ಲೋ- ಅಕಾ ಯುದ್ಧ ಸಂಭವಿಸಿತು. 17 ಡಿಸೆಂಬರ್ 1882 ರಂದು ಮೇಜರ್ ಬೆರೆಸ್‌ಫೋರ್ಡ್ ನಾಯಕತ್ವದಲ್ಲಿ ಇನ್ನೂರು ರೈಫಲ್‌ಗಳ ಪಡೆಯನ್ನು ಅಕಾ ರಾಜ ಮೇಧಿಗೆ ಸೇರಿದ ಹಳ್ಳಿಗಳ ಮೇಲೆ ದಾಳಿ ನಡೆಸಿಲು ಬ್ರಿಟೀಷರು ಕಳುಹಿಸಿದಾಗ ಯುದ್ಧವು ಪ್ರಾರಂಭವಾಯಿತು.
ಈ ಪ್ರದೇಶದಲ್ಲಿ ಮೊದಲ ಬಾರಿಗೆ ಬ್ರಿಟಿಷರು ಪೂರ್ಣ ಪ್ರಮಾಣದ ಯುದ್ಧವನ್ನು ಎದುರಿಸಿದರು. ಯುದ್ಧದ ಸಮಯದಲ್ಲಿ, ಮೇಧಿ ಸೈನಿಕರು ಬ್ರಿಟಿಷ್ ಸೈನಿಕರಿಗೆ ಭಾರಿ ಹಾನಿಯನ್ನುಂಟುಮಾಡಿದರು. ಮೇಧಿ ರಾಜ ದೂರದೃಷ್ಟಿಯುಳ್ಳ ನಾಯಕ ಮತ್ತು ಬ್ರಿಟಿಷ್ ವಿಸ್ತರಣಾವಾದಿತ್ವದ ಬಗ್ಗೆ ಚೆನ್ನಾಗಿ ತಿಳಿದ್ದವನಾದುದರಿಂದ ಅಕಾಗಳ ಮುಂದೆ ಬ್ರಿಟೀಷ್ ಸೈನ್ಯದ ಆಟಗಳು ಸಾಗಲಿಲ್ಲ. ಮೇಧಿರಾಜ ಅಕಾಗಳನ್ನು ಒಗ್ಗೂಡಿಸಿ, ನೆರೆಯ ಬುಡಕಟ್ಟುಗಳೊಂದಿಗೆ ಸೌಹಾರ್ದ ಸಂಬಂಧವನ್ನು ಬೆಳೆಸಿಕೊಂಡು ಬ್ರಿಟೀಷರ ವಿರುದ್ಧ ದಂಡೆತ್ತಿ ಬಂದ. ಇದರಿಂದ ಕಂಗೆಟ್ಟ ಬ್ರಿಟೀಷರು ತಮ್ಮ ಶಕ್ತಿಯನ್ನಷ್ಟೂ ಒಗ್ಗೂಡಿಸಿ ಅಕಾಗಳ ಮೇಲೆ ಸಮರ ಸಾರಿದರು. ಅಂತಿಮವಾಗಿ 1884 ರ ಜನವರಿ 21 ಮೇಧಿರಾಜನನ್ನು ಸೆರೆಹಿಡಿಯುವುದರೊಂದಿಗೆ ಯುದ್ಧ ಅಂತ್ಯಗೊಂಡಿತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!