ಮಳೆ ತಂದ ಅವಾಂತರವನ್ನು ವಿಡಿಯೋ ಮೂಲಕ ವರದಿ ಮಾಡಿದ ಪುಟಾಣಿ ಪತ್ರಕರ್ತೆ: ಹೇಗಿದೆ ನೋಡಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಜಮ್ಮು ಕಾಶ್ಮೀರದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದ ಆಗಿರುವ ಅವಾಂತರವನ್ನು ಪುಟ್ಟ ಹುಡುಗಿ ವಿಡಿಯೋ ಮೂಲಕ ವರದಿ ಮಾಡಿದ್ದಾಳೆ.
ಈ ವಿಶೇಷ ವಿಡಿಯೋವನ್ನು ಜಮ್ಮುವಿನ ವಕೀಲ ಸಾಜಿದ್‌ ಯೂಸುಫ್‌ ಶಾ ಟ್ವೀಟ್‌ ಮಾಡಿ, ಜಮ್ಮು ಕಣಿವೆಯ ಕಿರಿಯ ಪತ್ರಕರ್ತೆಯ ವರದಿ ನೋಡಿ ಎಂದು ವಿಶ್ಲೇಷಿಸಿದ್ದಾರೆ.

ಏನಿದೆ ವಿಡಿಯೋದಲ್ಲಿ?

6-8 ವರ್ಷದೊಳಗಿನ ಪುಟ್ಟ ಹುಡುಗಿ ತನ್ನೂರ ರಸ್ತೆಗಳು ಮಳೆಯಿಂದಾಗಿ ಕೊಚ್ಚೆಯಂತಾಗಿರುವ ಬಗ್ಗೆ ವಿಡಿಯೋ ಮೂಲಕ ಜನರಿಗೆ ತಿಳಿಸಿದ್ದಾಳೆ. ನಡೆದಾಡಲೂ ಸಾಧ್ಯವಾಗದ ಸ್ಥಿತಿಯಲ್ಲಿ ಈ ರಸ್ತಗಳು ಮಣ್ಣು ಹಾಗೂ ನೀರಿನಿಂದ ತುಂಬಿ ಹೋಗಿವೆ. ಆಕೆ ತನ್ನ ಸುತ್ತಲಿನ ಇಡೀ ಪ್ರದೇಶವನ್ನು ವಿಡಿಯೋದಲ್ಲಿ ತೋರಿಸುವ ಮೂಲಕ ಅದ್ಭುತವಾದ ವರದಿಯೊಂದನ್ನು ಜನರೆದುರು ತೋರಿಸಿದ್ದಾಳೆ.

ಈ ವಿಡಿಯೋ ನೋಡಿ ಸಾಕಷ್ಟು ಜನರು ಆಕೆಯ ಭಾಷೆ ಹಾಗೂ ಧೈರ್ಯವನ್ನು ಮೆಚ್ಚಿದರೆ. ಮತ್ತೆ ಕೆಲವರು ಅಲ್ಲಿನ ಮೌಲಸೌಕರ್ಯದ ಕೊರತೆಯನ್ನು ನಿಂದಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!