ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂದು ಚಿರಂಜೀವಿ ಸರ್ಜಾ ಹುಟ್ಟುಹಬ್ಬವಾಗಿದ್ದು, ಪತ್ನಿ ಮೇಘನಾ ಭಾವುಕ ಸಂದೇಶವೊಂದನ್ನು ಬರೆದು ವಿಶ್ ಮಾಡಿದ್ದಾರೆ.
ಮದುವೆಯ ಫೋಟೊವೊಂದನ್ನು ಶೇರ್ ಮಾಡಿದ್ದು, ನಾನು ಈಗಲೂ ನಗುತ್ತಿರುವುದಕ್ಕೆ ನೀನೇ ಕಾರಣ, ನಿನ್ನನ್ನು ಸದಾ ಪ್ರೀತಿಸುತ್ತೇನೆ, ನನ್ನ ಗಂಡನಿಗೆ ಹುಟ್ಟುಹಬ್ಬದ ಶುಭಾಷಯಗಳು ಎಂದು ಹೇಳಿದ್ದಾರೆ. ವಿಶ್ ನೋಡಿದ ಎಲ್ಲ ಅಭಿಮಾನಿಗಳು ಚಿರು ನಮ್ಮ ಹೃದಯದಲ್ಲಿ ಸದಾ ಜೀವಂತವಾಗಿದ್ದಾರೆ ಎಂದು ಹೇಳಿದ್ದಾರೆ.