ಟೆಸ್ಟ್‌ನಲ್ಲಿ ಸಿಕ್ಸರ್‌ ಸಿಡಿಸುವುದರಲ್ಲಿ ದಾಖಲೆ ಬರೆದ ಇಂಗ್ಲೆಂಡ್‌ ಕಪ್ತಾನ ಬೆನ್‌ ಸ್ಟೋಕ್ಸ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ 
ನ್ಯೂಜಿಲೆಂಡ್ ವಿರುದ್ಧ ಹೆಡಿಂಗ್ಲಿಯಲ್ಲಿ ನಡೆಯುತ್ತಿರುವ ಮೂರನೇ ಟೆಸ್ಟ್‌ ನಲ್ಲಿ ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ ನೂತನ ದಾಖಲೆ ಬರೆದಿದ್ದಾರೆ. ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ 100 ಸಿಕ್ಸರ್ ಬಾರಿಸಿದ ವಿಶ್ವದ ಮೂರನೇ ಬ್ಯಾಟರ್ ಎನಿಸಿಕೊಂಡರು.
ಟಿಮ್ ಸೌಥಿ ಎಸೆತದಲ್ಲಿ ಸಿಕ್ಸರ್‌ ಸಿಡಿಸುವುದರೊಂದಿಗೆ ಸ್ಟೋಕ್ಸ್  ತಮ್ಮ 151ನೇ ಟೆಸ್ಟ್ ಇನ್ನಿಂಗ್ಸ್‌ನಲ್ಲಿ ಈ ಸಾಧನೆ ಮಾಡಿದರು. ಆಸ್ಟ್ರೇಲಿಯಾದ ದಿಗ್ಗಜ ವಿಕೆಟ್‌ ಕೀಪರ್‌ ಬ್ಯಾಟ್ಸ್‌ ಮನ್‌ ಆಡಮ್ ಗಿಲ್‌ಕ್ರಿಸ್ಟ್ 96 ಟೆಸ್ಟ್‌ಗಳಿಂದ 100 ಸಿಕ್ಸ್ರ್‌ ಗಳನ್ನು ಸಿಡಿಸಿ ಎರಡನೇ ಸ್ಥಾನದಲ್ಲಿದ್ದಾರೆ. ಮಾಜಿ ಕಿವೀಸ್ ನಾಯಕ ಮತ್ತು ಪ್ರಸ್ತುತ ಇಂಗ್ಲೆಂಡ್ ಟೆಸ್ಟ್ ಮಾದರಿಯ ಕೋಚ್ ಬ್ರೆಂಡನ್ ಮೆಕಲಮ್ 176 ಇನ್ನಿಂಗ್ಸ್‌ಗಳಲ್ಲಿ 107 ಸಿಕ್ಸರ್‌ಗಳೊಂದಿಗೆ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.
ಕ್ರಿಸ್ ಗೇಲ್ (98) ಮತ್ತು ಜಾಕಸ್ ಕಾಲಿಸ್ (97) ಅಂಕಪಟ್ಟಿಯಲ್ಲಿ ಸ್ಥಾನ ಪಡೆದ ಇತರೆ ಬ್ಯಾಟ್ಸ್‌ ಮನ್‌ ಗಳಾಗಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!