Thursday, March 23, 2023

Latest Posts

SHOCKING | ಪುತ್ತೂರು ನಗರಸಭಾ ಸದಸ್ಯ ನೇಣಿಗೆ ಶರಣು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ನಗರಸಭಾ ಸದಸ್ಯರೋರ್ವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಪುತ್ತೂರಿನಲ್ಲಿ ನಡೆದಿದ್ದು, ಮೃತರನ್ನು ಪುತ್ತೂರು ನಗರಸಭಾ ಸದಸ್ಯ ಶಿವರಾಮ್ ಸಪಲ್ಯ ಎಂದು ಗುರುತಿಸಲಾಗಿದೆ.

ಶಿವರಾಮ್ ಸಪಲ್ಯ ಅವರು ಊರಮಾಲು ನಿವಾಸಿಯಾಗಿದ್ದು, ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆನ್ನಲಾಗಿದೆ.

ಪತಿಯು ಫೋನ್ ಕರೆ ಸ್ವೀಕರಿಸುತ್ತಿಲ್ಲವೆಂದು ಪತ್ನಿಯು ಹತ್ತಿರದ ಮನೆಯವರ ಹತ್ತಿರ ಮನೆ ಬಳಿ ತೆರಳುವಂತೆ ತಿಳಿಸಿದ್ದು, ಈ ವೇಳೆ ಅವರು ಮನೆ ಬಳಿ ತೆರಳಿ ನೋಡಿದಾಗ ಶಿವರಾಮ್ ಅವರು ನೇಣು ಬಿಗಿದುಕೊಂಡಿದ್ದರು ಎಂದು ತಿಳಿದು ಬಂದಿದೆ. ಮೃತರು ಪತ್ನಿ ಮತ್ತು ಮಕ್ಕಳನ್ನು ಅಗಲಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!