ಹೊಸದಿಗಂತ ಡಿಜಿಟಲ್ ಡೆಸ್ಕ್:
ಸೂರ್ಯ ಗ್ರಹಣದ ವೇಳೆ ಹಲವು ಕಡೆಗಳಲ್ಲಿ ಆಹಾರ ಸೇವನೆ ಮಾಡಲಾಗಿದೆ. ಬೆಂಗಳೂರಿನಲ್ಲಿ ಗ್ರಹಣದ ಸಂದರ್ಭದಲ್ಲಿ ಉಪಹಾರ ಸೇವನೆ ಮಾಡಲಾಗಿದೆ.
ಮೂಢನಂಬಿಕೆ ವಿರೋಧಿ ವೇದಿಕೆ ಸದಸ್ಯರು ಹಣ್ಣು, ತಿಂಡಿ ಸೇವಿಸಿ ಮೌಲ್ಯಕ್ಕೆ ಸೆಡ್ಡು ಹೊಡೆದಿದ್ದಾರೆ.
ಗ್ರಹಣಗಳ ಹೆಸರಲ್ಲಿ ಮೌಢ್ಯ ಬಿತ್ತುವ ಕೆಲಸ ಮಾಡಲಾಗುತ್ತಿದೆ. ಗ್ರಹಣಗಳ ಬಗ್ಗೆ ಜನರು ಆತಂಕಪಡುವುದು ಬೇಡ ಎಂದು ಮೂಢನಂಬಿಕೆ ವಿರೋಧಿ ವೇದಿಕೆಯ ನರಸಿಂಹಮೂರ್ತಿ ಹೇಳಿದ್ದಾರೆ.
ಕಲಬುರ್ಗಿಯಲ್ಲಿ ಗ್ರಹಣದ ಸಮಯದಲ್ಲಿ ಉಪಾಹಾರ ಸೇವನೆ ಮಾಡಲಾಗಿದ್ದು. ಜ್ಞಾನ ವಿಜ್ಞಾನ ಸಮಿತಿಯಿಂದ ಉಪಹಾರ ಕೂಟ ಆಯೋಜನೆ ಮಾಡಲಾಗಿದೆ.