ಹೊಸದಿಗಂತ ಡಿಜಿಟಲ್ ಡೆಸ್ಕ್:
ಮೇರಿ ಮಿಟ್ಟಿ ಮೇರಿ ದೇಶ್(ನನ್ನ ಮಣ್ಣು ನನ್ನ ದೇಶ) ಅಮೃತ ಕಲಶ ಯಾತ್ರೆ ಸಮಾರೋಪ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಂಡಿದ್ದಾರೆ .
ಈ ವೇಳೆಮಣ್ಣು ಮುಟ್ಟಿ ನಮಸ್ಕರಿಸಿ ದೇಶಕ್ಕೆ ಸಮರ್ಪಿಸಿದ್ದಾರೆ, ಮೋದಿ ಮಣ್ಣನ್ನು ತೆಗೆದು ಹಣೆಗೆ ತಿಲಕವಿಟ್ಟಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ.
ದೆಹಲಿಯ ಕರ್ತವ್ಯ ಪತ್ ನಲ್ಲಿ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿತ್ತು. ದೇಶದಲ್ಲಿ ಲಕ್ಷಾಂತರ ಹೋರಾಟಗಾರರು ಸ್ವಾತಂತ್ರ್ಯಕ್ಕಾಗಿ ಪ್ರಾಣತೆತ್ತಿದ್ದಾರೆ. ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿ 75 ವರ್ಷ ಪೂರೈಸಿದ ಆಜಾದಿ ಕಾ ಅಮೃತ ಮಹೋತ್ಸವ್ ಸಂದರ್ಭ ಪ್ರಧಾನಿ ನರೇಂದ್ರ ಮೋದಿ ಮೇರಿ ಮಿಟ್ಟಿ ಮೇರ್ ದೇಶ್ ಅಭಿಯಾನಕ್ಕೆ ಚಾಲನೆ ನೀಡಿದ್ದರು. ಕಳೆದ ಕೆಲ ದಿನಗಳಿಂದ ದೇಶದ ಮೂಲೆ ಮೂಲೆಯಿಂದ ಮಣ್ಣು ಸಂಗ್ರಹ ಮಾಡಿ ದೆಹಲಿ ಕೊಂಡೊಯ್ಯಲಾಗಿತ್ತು. ಇಂದು ಈ ಮಣ್ಣನ್ನು ಸಮರ್ಪಿಸಲಾಗಿದೆ.
देश की मिट्टी को नमन!#MeriMaatiMeraDesh pic.twitter.com/WMF3BxRdDW
— BJP (@BJP4India) October 31, 2023
ಇದೇ ಕಾರ್ಯಕ್ರಮದಲ್ಲಿ ಮೇರಾ ಯುವ ಭಾರತ್ ಪೋರ್ಟಲ್ ಗೂ ಮೋದಿ ಚಾಲನೆ ನೀಡಿದ್ದಾರೆ.