ಹೊಸದಿಗಂತ ವರದಿ, ಮಡಿಕೇರಿ:
ನಿರ್ಮಾಣ ಹಂತದ ಕಟ್ಟಡ ಕಾಮಗಾರಿ ಸಂದರ್ಭ ಬರೆ ಕುಸಿದ ಪರಿಣಾಮ ಓರ್ವ ಸಾವನ್ನಪ್ಪಿರುವ ಘಟನೆ ಮಂಗಳವಾರ ಸಂಜೆ ನಗರದಲ್ಲಿ ನಡೆದಿದೆ. ಇನ್ನಿಬ್ಬರು ಮಣ್ಣಿನಡಿ ಸಿಲುಕಿರುವ ಶಂಕೆ ವ್ಯಕ್ತವಾಗಿದ್ದು, ಶೋಧ ಮುಂದುವರಿದಿದೆ.
ಮಡಿಕೇರಿಯ ಸ್ಟುವರ್ಟ್ ಹಿಲ್’ನ ರೆಡ್’ಕ್ರಾಸ್ ಕಚೇರಿ ಸಮೀಪ ನಿರ್ಮಾಣ ಹಂತದಲ್ಲಿದ್ದ ಕಟ್ಟಡದ ತಳಪಾಯ ನಿರ್ಮಿಸಲು 9ಮಂದಿ ಕಾರ್ಮಿಕರು ಕೆಲಸ ಮಾಡುತ್ತಿದ್ದರೆನ್ನಲಾಗಿದೆ. ಮಂಗಳವಾರ ಸಂಜೆ ಮೇಲ್ಭಾಗದ ಬರೆ ಕುಸಿದ ಪರಿಣಾಮ ಬಸವ, ಆನಂದ, ಲಿಂಗಪ್ಪ ಸೇರಿದಂತೆ ಒಟ್ಟು ನಾಲ್ಕು ಮಂದಿ ಮಣ್ಣಿನಡಿ ಸಿಲುಕಿದ್ದು,ಓರ್ವನನ್ನು ರಕ್ಷಿಸಲಾಗಿದೆ. ಮತ್ತೋರ್ವ ಸಾವಿಗೀಡಾಗಿದ್ದು, ಇನ್ನುಳಿದ ಇಬ್ಬರಿಗಾಗಿ ಶೋಧ ನಡೆಸಲಾಗುತ್ತಿದೆ. ಕಾರ್ಮಿಕರೆಲ್ಲರೂ ಉತ್ತರ ಕರ್ನಾಟಕದವರೆಂದು ಹೇಳಲಾಗಿದೆ.
ಅಗ್ನಶಾಮಕ ದಳ ಹಾಗೂ ಸ್ಥಳೀಯರು ಶೋಧ ಕಾರ್ಯ ನಡೆಸುತ್ತಿದ್ದು, ವಿಷಯ ತಿಳಿಯುತ್ತಿದ್ದಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ಶಾಸಕ ಮಂಥರ್ ಗೌಡ ಅವರುಗಳು ಸ್ಥಳಕ್ಕೆ ಧಾವಿಸಿದ್ದಾರೆ.