ಚೀನಾದಲ್ಲಿ ಮತ್ತೆ ಹೆಚ್ಚುತ್ತಿದೆ ಕೊರೋನಾ ಸೋಂಕಿನ ಪ್ರಮಾಣ: ಆತಂಕದಲ್ಲಿ ಜನತೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಚೀನಾದಲ್ಲಿ ಕೊರೋನಾ ಸೋಂಕಿನ ಪ್ರಮಾಣ ಕಡಿಮೆಯಾಗುವ ಲಕ್ಷಣ ಕಾಣುತ್ತಿಲ್ಲ. ಇದರಿಂದ ಮತ್ತೆ ಆತಂಕ ಸೃಷ್ಟಿಯಾಗ್ತಿದೆ. ಆಸ್ಪತ್ರೆ ಕೋವಿಡ್ ಸೋಂಕಿತರಿಂದ ತುಂಬಿಹೋಗಿದೆ.

ಅಕ್ಟೋಬರ್ ನಲ್ಲಿ ಚೀನಾ ಶೂನ್ಯ ಕೋವಿಡ್ ನೀತಿ ಜಾರಿಗೊಳಿಸಿದ್ದರಿಂದ ಭಾರೀ ಕೋಲಾಹಲವೆದ್ದಿತು. ಬಳಿಕ ಜನ ವಿರೋಧ ವ್ಯಕ್ತವಾಗ್ತಿದ್ದಂತೆ ಕಠಿಣ ನಿರ್ಬಂಧಗಳನ್ನುಸಡಿಲಗೊಳಿಸಿತು.

ಇದರ ಪರಿಣಾಮ ಚೀನಾದಲ್ಲಿ ಮತ್ತೆ ಕೊರೋನಾ ಹೆಚ್ಚಾಗಿದ್ದು, ಆತಂಕ ಮನೆ ಮಾಡಿದೆ.
ಸಾಂಕ್ರಾಮಿಕ ರೋಗಶಾಸ್ತ್ರಜ್ಞರಾದ ಎರಿಕ್ ಫೀಗಲ್-ಡಿಂಗ್, ಚೀನಾದಲ್ಲಿ ‘ಥರ್ಮೋನ್ಯೂಕ್ಲಿಯರ್ ಕೆಟ್ಟ’ ಪರಿಸ್ಥಿತಿಯ ಬಗ್ಗೆ ಎಚ್ಚರಿಕೆ ನೀಡಿದ್ದಾರೆ.

ಎರಿಕ್ ಫೀಗಲ್-ಡಿಂಗ್ ಒಬ್ಬ ಅಮೇರಿಕನ್ ಸಾರ್ವಜನಿಕ ಆರೋಗ್ಯ ವಿಜ್ಞಾನಿಯಾಗಿದ್ದು, ಅವರು ಪ್ರಸ್ತುತ ನ್ಯೂ ಇಂಗ್ಲೆಂಡ್ ಕಾಂಪ್ಲೆಕ್ಸ್ ಸಿಸ್ಟಮ್ಸ್ ಇನ್‌ಸ್ಟಿಟ್ಯೂಟ್‌ನಲ್ಲಿ ಕೋವಿಡ್ ಟಾಸ್ಕ್ ಫೋರ್ಸ್‌ನ ಮುಖ್ಯಸ್ಥರಾಗಿದ್ದಾರೆ.

ಚೀನಾದಲ್ಲಿನವೆಂಬರ್ ಮಧ್ಯದಿಂದ ವೈರಸ್‌ನಿಂದ ಹನ್ನೊಂದು ಅಧಿಕೃತ ಸಾವುಗಳನ್ನು ವರದಿ ಮಾಡಿದೆ, ಅಂದಿನಿಂದ 10,000 ಕ್ಕೂ ಹೆಚ್ಚು ದೈನಂದಿನ ಸೋಂಕುಗಳು ವರದಿಯಾಗಿವೆ. ಆದರೆ ಸ್ಮಶಾನಗಳಲ್ಲಿನ ಕೆಲಸಗಾರರು ಮತ್ತು ಚೀನಾದ ಆಸ್ಪತ್ರೆಗಳನ್ನು ತೋರಿಸುವ ವೀಡಿಯೊಗಳು ವಿಭಿನ್ನ ಕಥೆಯನ್ನು ಹೇಳುತ್ತಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!