Wednesday, February 8, 2023

Latest Posts

ಭಾರತದ ಗ್ಲೋಬಲ್‌ ಬ್ಯಸಿನೆಸ್‌ ಮುಖ್ಯಸ್ಥರಾಗಿ ವಿಕಾಸ್‌ ಪುರೋಹಿತ್‌ ನೇಮಿಸಿದ ಮೆಟಾ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಪ್ರಸಿದ್ಧ ಸೋಷಿಯಲ್‌ ಮೀಡಿಯಾ ಪ್ಲಾಟ್‌ ಫಾರ್ಮ್‌ ಗಳಾದ ಫೆಸ್ಬುಕ್‌, ಇನ್ಸ್ಟಾಗ್ರಾಂ ಮಾತೃಸಂಸ್ಥೆ ಮೆಟಾ ತನ್ನ ಭಾರತದ ಗ್ಲೋಬಲ್‌ ಬ್ಯುಸಿನೆಸ್‌ ಗುಪ್‌ ಮುಖ್ಯಸ್ಥರನ್ನಾಗಿ ವಿಕಾಸ್‌ ಪುರೋಹಿತ್‌ ರನ್ನು ನೇಮಕ ಮಾಡಿದೆ. ಈ ಸ್ಥಾನದಲ್ಲಿ ಅವರು ಭಾರತದಲ್ಲಿ ಮೆಟಾದ ವ್ಯಾಪಾರ ಅಭಿವೃದ್ಧಿಗೆ ಕೆಲಸ ಮಾಡಲಿದ್ದಾರೆ. ಭಾರತದ ಪ್ರಮುಖ ಚಾನಲ್‌ಗಳಲ್ಲಿ ಮೆಟಾ ಆದಾಯದ ಬೆಳವಣಿಗೆಯನ್ನು ಹೆಚ್ಚಿಸಲು ದೇಶದ ಪ್ರಮುಖ ಬ್ರ್ಯಾಂಡ್‌ಗಳು ಮತ್ತು ಏಜೆನ್ಸಿಗಳೊಂದಿಗೆ ಕಂಪನಿಯ ಕಾರ್ಯತಂತ್ರದ ಸಂಬಂಧವನ್ನು ಮುನ್ನಡೆಸುತ್ತಾರೆ ಎಂದು ಕಂಪನಿಯು ಹೇಳಿಕೆಯಲ್ಲಿ ತಿಳಿಸಿದೆ.

ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್-ಬೆಂಗಳೂರಿನ ಹಳೆಯ ವಿದ್ಯಾರ್ಥಿಯಾಗಿರುವ ಪುರೋಹಿತ್‌ ಟಾಟಾ CLiQ, ಅಮೆಜಾನ್, ರಿಲಯನ್ಸ್ ಬ್ರಾಂಡ್ಸ್ ಲಿಮಿಟೆಡ್, ಆದಿತ್ಯ ಬಿರ್ಲಾ ಗ್ರೂಪ್ ಮತ್ತು ಟಾಮಿ ಹಿಲ್ಫಿಗರ್ ಮುಂತಾದ ಕಂಪನಿಗಳೊಂದಿಗೆ ಕೆಲಸ ಮಾಡಿದ್ದಾರೆ. ಆದಿತ್ಯ ಬಿರ್ಲಾ ಗ್ರುಪ್‌ ನಲ್ಲಿ ತಮ್ಮ ವೃತ್ತಿ ಜೀವನ ಪ್ರಾರಂಭಿಸಿದ ಪುರೋಹಿತ್ ನಂತರ ರಿಲಯನ್ಸ್ ಬ್ರಾಂಡ್ಸ್ ಲಿಮಿಟೆಡ್‌ನಲ್ಲಿ ಸಗಟು ವ್ಯಾಪಾರದ ಮುಖ್ಯಸ್ಥರಾಗಿದ್ದರು. ಅಮೇಜಾನ್‌ ಫ್ಯಾಶನ್‌ ಅನ್ನು ಪ್ರಾರಂಭಿಸಿ ಅದನ್ನು ಕಟ್ಟಿನಿಲ್ಲಿಸಿದ್ದರಲ್ಲಿಯೂ ಪುರೋಹಿತ್‌ ಅವರ ಶ್ರಮವಿದೆ. ಅವರ ಕೊನೆಯ ಅವಧಿಯು ಟಾಟಾ ಕ್ಲಿಕ್‌ನಲ್ಲಿತ್ತು, ಅಲ್ಲಿ ಅವರು ಸಿಇಒ ಆಗುವ ಮೊದಲು ಸಿಒಒ ಆಗಿ ಸೇರಿಕೊಂಡಿದ್ದರು. ಪ್ರಸ್ತುತ ಮೆಟಾದ ಗ್ಲೋಬಲ್‌ ಬ್ಯುಸಿನೆಸ್‌ ಇನ್‌ ಇಂಡಿಯಾ ಮುಖ್ಯಸ್ಥರಾಗಿ ನೇಮಕ ಗೊಂಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!