‘ಮೆಟಾ’ ಅಂತಿಮ ಸುತ್ತಿನ ವಜಾ: 10,000 ಉದ್ಯೋಗಿಗಳಿಗೆ ಗೇಟ್ ಪಾಸ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಈಗಾಗಲೇ ಹಲವು ಬಾರಿ ಫೇಸ್‌ಬುಕ್ ಮತ್ತು ವಾಟ್ಸಾಪ್‌ನ ಮಾತೃ ಸಂಸ್ಥೆಯಾದ ಮೆಟಾ(Meta) ಸಾವಿರಾರು ಜನರನ್ನು ಕೆಲ್ಸದಿಂದ ವಜಾಗೊಳಿಸಿದ್ದು, ಇದೀಗ ಮತ್ತೆ ಅಂತಿಮ ಸುತ್ತಿನ ವಜಾ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ.

ಇದರ ಭಾಗವಾಗಿ ತನ್ನ ವಿವಿಧ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌’ಗಳಾದ ಫೇಸ್ ಬುಕ್ (Facebook), ವಾಟ್ಸಾಪ್ (WhatsApp) ಮತ್ತು ಇನ್ಟಾಗ್ರಾಂ (Instagram)ನಿಂದ ಸುಮಾರು 10,000 ಜನರನ್ನು ವಜಾಗೊಳಿಸಲಿದೆ.

ಈ ಹಿಂದೆ, ಕಂಪನಿಯು ನವೆಂಬರ್ 2022ರಲ್ಲಿ 11,000 ಉದ್ಯೋಗಿಗಳನ್ನ ವಜಾಗೊಳಿಸಿತ್ತು.

ವಜಾದ ನಂತರ, ಉದ್ಯೋಗಿಗಳ ಸಂಖ್ಯೆಯು 2021ರ ಮಧ್ಯಭಾಗಕ್ಕೆ ಸಮನಾಗಿರುತ್ತದೆ. ಕಂಪನಿಯು 2020ರಿಂದ ಭಾರಿ ನೇಮಕಾತಿಯನ್ನ ಮಾಡಿದೆ. ಈ ನೇಮಕದ ನಂತ್ರ ಕಂಪನಿಯಲ್ಲಿ ಉದ್ಯೋಗಿಗಳ ಸಂಖ್ಯೆ ದ್ವಿಗುಣಗೊಂಡಿದೆ. ಲಿಂಕ್ಡ್‌ಇನ್ ಮೂಲಕ, ಕಂಪನಿಯು ಈ ಹಿಂಬಡ್ತಿಯನ್ನ ಹೊಸದಾಗಿ ಉದ್ಯೋಗಿಗಳಿಗೆ ತಿಳಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!