May 21, 2026
Thursday, May 21, 2026
spot_img

ಪಾರ್ಲೆ Melodyಗೂ ಮುನ್ನ ಭಾರತಕ್ಕೆ ಮೊದಲ ಚಾಕೊಲೇಟ್ ನೀಡಿದ್ದದ್ದು ಬಿಹಾರದ ಈ ಫ್ಯಾಕ್ಟರಿಯೇ?!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇತ್ತೀಚೆಗೆ ಮೋದಿ-ಮೆಲೋನಿ Melody ವಿಡಿಯೋ ವೈರಲ್ ಆದ ಬಳಿಕ Melody ಟಾಫಿ ಹಾಗೂ ಭಾರತೀಯ ಸಿಹಿ ಉತ್ಪನ್ನಗಳು ಜಾಗತಿಕ ಮಟ್ಟದಲ್ಲಿ ಗಮನ ಸೆಳೆಯುತ್ತಿದ್ದು ಇದರ ಬೆನ್ನಿಗೇ ಭಾರತದ ಮೊದಲ ಚಾಕೊಲೇಟ್ ಎಲ್ಲಿ ತಯಾರಾಯಿತು? ಎಂಬ ಪ್ರಶ್ನೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

ಪಾರ್ಲೆಗೂ ಮೊದಲು ಭಾರತದಲ್ಲಿ ಮೊದಲ ಚಾಕೊಲೇಟ್ ತಯಾರಿಕೆ ಆರಂಭಿಸಿದ್ದದ್ದು ಬಿಹಾರದ ಒಂದು ಐತಿಹಾಸಿಕ ಫ್ಯಾಕ್ಟರಿ ಎಂಬ ಮಾಹಿತಿ ಈಗ ಸಾಮಾಜಿಕ ಜಾಲತಾಣಗಳಲ್ಲಿ ಮತ್ತೆ ವೈರಲ್ ಆಗಿದೆ.

1929ರಲ್ಲೇ ಆರಂಭವಾಗಿತ್ತೇ ಚಾಕೊಲೇಟ್ ಉತ್ಪಾದನೆ?

ಬಿಹಾರದಲ್ಲಿ 1929ರಲ್ಲೇ ಸ್ಥಳೀಯ ಮಟ್ಟದಲ್ಲಿ ಚಾಕೊಲೇಟ್ ತಯಾರಿಕೆ ಆರಂಭವಾಗಿತ್ತು. ಅಂದಿನ ಕಾಲದಲ್ಲಿ ವಿದೇಶಿ ಬ್ರ್ಯಾಂಡ್‌ಗಳ ಪ್ರಭಾವ ಹೆಚ್ಚು ಇದ್ದರೂ, ಭಾರತೀಯ ಮಟ್ಟದಲ್ಲಿ ಚಾಕೊಲೇಟ್ ಉತ್ಪಾದನೆಗೆ ಈ ಫ್ಯಾಕ್ಟರಿ ಪ್ರಮುಖ ಆರಂಭಿಕ ಹೆಜ್ಜೆ ಇಟ್ಟಿತ್ತು ಎಂದು ಕೆಲವರು ಚರ್ಚೆ ಆರಂಭಿಸಿದ್ದಾರೆ. ಜೊತೆಗೆ ಹಳೆಯ ಫ್ಯಾಕ್ಟರಿಗಳ ಚಿತ್ರಗಳು, ದಾಖಲೆಗಳು ಮತ್ತು ಇತಿಹಾಸ ಹಂಚಿಕೊಳ್ಳುತ್ತಿದ್ದಾರೆ.

ಸಾಮಾಜಿಕ ಜಾಲತಾಣಗಳ ಯುಗದಲ್ಲಿ ಹಳೆಯ ಘಟನೆಗಳು, ಮರೆತುಹೋದ ಬ್ರ್ಯಾಂಡ್‌ಗಳು ಮತ್ತು ಐತಿಹಾಸಿಕ ಮಾಹಿತಿಗಳು ಮತ್ತೆ ವೈರಲ್ ಆಗುತ್ತಿರುವುದು ಉತ್ತಮ ಬೆಳವಣಿಗೆಯಾಗಿದ್ದು ಈಗ ಬಿಹಾರದ ಈ ಚಾಕೊಲೇಟ್ ಫ್ಯಾಕ್ಟರಿಯ ಕಥೆ ಮತ್ತೆ ಮುನ್ನೆಲೆಗೆ ಬಂದಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !