ಇಂದು ಮೆಂತ್ಯೆ ಸಜ್ಜೆ ರೊಟ್ಟಿ ಟ್ರೈ ಮಾಡಿ..

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಗುಜರಾತ್‌ನ ಫೇಮಸ್‌ ಫುಡ್‌ ರೆಸಿಪಿ ಇದು. ಗುಜರಾತಿ ಡೇಬ್ರಾ ಅಂತ ಕರೆಯುವ ಈ ಅಡುಗೆಗೆ ಕನ್ನಡದಲ್ಲಿ ಮೆಂತ್ಯ ಸಜ್ಜೆ ರೊಟ್ಟಿ ಅಂತ ಕರೀತಾರೆ. ಕೇಲ್ತಿದ್ರನೆ ಬಾಯಲ್ಲಿ ನೀರೂರುತ್ತೆ..ಇನ್ನೂ ತಿಂದ್ರೆ ಆಹಾ.. ಒಂದ್ಸಲ ಟ್ರೈ ಮಾಡಿ.

ಬೇಕಾಗುವ ಪದಾರ್ಥಗಳು

1 ಕಪ್ ಮೊಸರು
1/2 ಟೀಸ್ಪೂನ್ ಕಾಳು ಮೆಣಸು (ಪುಡಿಮಾಡಿದ)
2 ಮೆಣಸಿನಕಾಯಿ (ಸಣ್ಣಗೆ ಕತ್ತರಿಸಿದ)
2 ಟೇಬಲ್ಸ್ಪೂನ್ ಬೆಲ್ಲ
1/2 ಟೀಸ್ಪೂನ್ ಜೀರಿಗೆ ಪುಡಿ
1/2 ಟೀಸ್ಪೂನ್ ಮೆಣಸಿನ ಪುಡಿ
2 ಟೇಬಲ್ಸ್ಪೂನ್ ಎಳ್ಳು
1/4 ಟೀಸ್ಪೂನ್ ಅಜ್ವಾನ
1 ಟೀಸ್ಪೂನ್ ಶುಂಠಿ ಪೇಸ್ಟ್
1/2 ಟೀಸ್ಪೂನ್ ಉಪ್ಪು
1 ಕಪ್ ಮೆಂತ್ಯೆ ಸೊಪ್ಪು (ಸಣ್ಣಗೆ ಕತ್ತರಿಸಿದ)
2 ಟೇಬಲ್ಸ್ಪೂನ್ ಕೊತ್ತಂಬರಿ ಸೊಪ್ಪು (ಸಣ್ಣಗೆ ಕತ್ತರಿಸಿದ)
2 ಕಪ್ ಸಜ್ಜೆ ಹಿಟ್ಟು
1/2 ಕಪ್ ಗೋಧಿ ಹಿಟ್ಟು
ತುಪ್ಪ (ಹುರಿಯಲು)

ಮಾಡುವ ವಿಧಾನ

ದೊಡ್ಡ ಬಟ್ಟಲಿನಲ್ಲಿ ಮೇಲೆ ನೀಡಿರುವ ಪದಾರ್ಥಗಳನ್ನು ಒಂದಾದ ಮೇಲೊಂದರಂತೆ ಹಾಕಿ ಚೆನ್ನಾಗಿ ಕಲಸಿ. ಬಳಿಕ ಇದಕ್ಕೆ 2 ಕಪ್ ಸಜ್ಜೆ ಹಿಟ್ಟು ಮತ್ತು 1/2 ಕಪ್ ಗೋಧಿ ಹಿಟ್ಟು ಸೇರಿಸಿ. ಮೃದುವಾಗಿ ಹೆಚ್ಚು ಒತ್ತಡ ಹಾಕದೆ ರೊಟ್ಟಿಗೆ ಕಲಸಿದ ಹಾಗೆ ಮಿಶ್ರಣ ಮಾಡಿ. ಕೊನೆಗೆ ಹಿಟ್ಟನ್ನು ತುಪ್ಪದೊಂದಿಗೆ ಗ್ರೀಸ್ ಮಾಡಿ. 20 ನಿಮಿಷಗಳ ಕಾಲ ಮುಚ್ಚಿಡಿ. ನಂತರ ಹಿಟ್ಟನ್ನು ಮತ್ತೆ ಮೃದುವಾಗಿ ಒತ್ತಿ. ಬಳಿಕ ಚೆಂಡಿನ ಗಾತ್ರದ ಹಿಟ್ಟನ್ನು ತೆಗೆದುಕೊಂಡು ಭಾರ ಹಾಕದೆ ಚಪಾತಿ ಲಟ್ಟಿಸಿದ ಹಾಗೆ ಲಟ್ಟಿಸಿ ಬಿಸಿ ತವಾ ಮೇಲೆ ಹಾಕಿ ಅದಕ್ಕೆ ತುಪ್ಪ ಸವರಿ ಎರಡೂ ಬದಿ ಬೇಯಿಸಿದ್ರೆ ರುಚಿಯಾದ ಮೆಂತ್ಯೆ ಸಜ್ಜೆ ರೊಟ್ಟಿ ರೆಡಿ. ಚಟ್ನಿ ಅಥವಾ ಮೊಸರಿನೊಂದಿಗೆ ಸರ್ವ್‌ ಮಾಡಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!