October 10, 2026
Saturday, October 10, 2026
spot_img

ಫೇಮಸ್‌ ಸೀರೀಸ್‌ ಗೇಮ್‌ ಆಫ್‌ ಥ್ರೋನ್ಸ್‌ನ ಕಲಾವಿದ ಮೈಕೆಲ್ ಪ್ಯಾಟ್ರಿಕ್ ನಿಧನ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಜನಪ್ರಿಯ ಸೀರೀಸ್‌ ಗೇಮ್‌ ಆಫ್‌ ಥ್ರೋನ್ಸ್‌ನ ಕಲಾವಿದ ಮೈಕೆಲ್‌ ಪ್ಯಾಟ್ರಿಕ್‌ ನಿಧನರಾಗಿದ್ದಾರೆ.

ಅವರಿಗೆ ಕೇವಲ 35 ವರ್ಷ ವಯಸ್ಸಾಗಿತ್ತು. ಮೋಟಾರ್ ನ್ಯೂರಾನ್‌ ಕಾಯಿಲೆಯೊಂದರಿಂದ ಬಳಲುತ್ತಿದ್ದರು. ಮೂರು ವರ್ಷಗಳ ಹಿಂದೆ ಮೈಕೆಲ್‌ಗೆ ಈ ಸಮಸ್ಯೆ ಕಾಡಿತ್ತು. ಇದು ನರ ಕೋಶಗಳ ಮೇಲೆ ಹಾಗೂ ಉಸಿರಾಟದ ಮೇಲೆ ಪರಿಣಾಮ ಬೀರುತ್ತದೆ.

ಈ ಬಗ್ಗೆ ಮೈಕೆಲ್‌ ಪತ್ನಿ ನವೋಮಿ ಭಾವನಾತ್ಮಕ ಪೋಸ್ಟ್‌ ಒಂದನ್ನು ಹಾಕಿದ್ದಾರೆ. ಜಗತ್ತಿನಲ್ಲಿ ಅತಿ ಮುಖ್ಯವಾದ ವಿಷಯವೆಂದರೆ ತಿನ್ನಲು ಏನಾದರೂ, ಕುಡಿಯಲು ಏನಾದರೂ ಮತ್ತು ಪ್ರೀತಿಸಲು ಯಾರಾದರೂ ಇರುವುದು. ಆದ್ದರಿಂದ ಹೆಚ್ಚು ಯೋಚಿಸಬೇಡಿ, ತಿನ್ನಿರಿ. ಕುಡಿಯಿರಿ ಮತ್ತು ಪ್ರೀತಿಸಿ ಎಂದು ಬರೆದುಕೊಂಡಿದ್ದಾರೆ. ಮೈಕೆಲ್‌ಗೆ ದೇಹದಲ್ಲಿನ ಸ್ನಾಯುಗಳನ್ನು ನಿಯಂತ್ರಿಸುವ ನರಗಳು ಕ್ರಮೇಣ ನಿಷ್ಕ್ರಿಯಗೊಳ್ಳುವ ಕಾಯಿಲೆ ಇರುವುದು ಪತ್ತೆಯಾಯಿತು. ಕಳೆದ ಕೆಲವು ತಿಂಗಳುಗಳಿಂದ ಅವರ ಸ್ಥಿತಿ ಹದಗೆಟ್ಟಿತ್ತು ಎಂದಿದ್ದಾರೆ.

Must Read