Tuesday, March 28, 2023

Latest Posts

ರಾಜ್ಯ ಸರ್ಕಾರ ರೂಪಿಸಿದ ಯಾವುದೇ ನೀತಿಯಿಂದಾಗಿ ಹಾಲು ಉತ್ಪಾದನೆ ಕಡಿಮೆ ಆಗಿಲ್ಲ: ಸಿಎಂ ಬೊಮ್ಮಾಯಿ

ಹೊಸದಿಗಂತ ವರದಿ,ಹಾವೇರಿ:

ಕೊರೋನಾ ಸಂದರ್ಭದಲ್ಲಿ, ಜಾನುವಾರುಗಳಿಗೆ ತಗುಲಿದ ಚರ್ಮ ಗಂಟು ರೋಗದ ಸಂದರ್ಭ ಹಾಗೂ ಬೇಸಿಗೆ ಸಂದರ್ಭದಲ್ಲಿ ಸಹಜ ಎನ್ನುವಂತೆ ರಾಜ್ಯದಲ್ಲಿ ಹಾಲು ಉತ್ಪಾದನೆ ಕಡಿಮೆ ಆಗಿತ್ತೇ ವಿನಃ ರಾಜ್ಯ ಸರ್ಕಾರ ರೂಪಿಸಿದ ಯಾವುದೇ ನೀತಿಯಿಂದಾಗಿ ಕಡಿಮೆ ಆಗಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ನಗರದ ಹೊರವಲಯದಲ್ಲಿರುವ ಜಂಗಮನಕೊಪ್ಪ ಗ್ರಾಮದಲ್ಲಿ ಕೆ.ಎಂ.ಎಫ್ ಹಾಗೂ ಹಾವೆಮುಲ್ ಸಹಯೋಗದಲ್ಲಿ ಶುಕ್ರವಾರ ಆಯೋಜಿಸಿದ ನೂತನ ಯು.ಹೆಚ್.ಟಿ. ಹಾಲು ಸಂಸ್ಕರಣ, ಪ್ಯಾಕಿಂಗ್ ಸ್ಥಾವರ ಮತ್ತು ಹಾಲು ಸ್ಯಾಚೆಟ್ ಪ್ಯಾಂಕಿಂಗ್ ಘಟಕ ಲೋಕಾರ್ಪಣೆಗೊಳಿಸಿ ಮಾತನಾಡಿ, ರಾಜ್ಯದಲ್ಲಿ ಕಳೆದ ಮೂರು ವರ್ಷಗಳಿಂದ ಹಾಲು ಉತ್ಪಾದನೆ ಕಡಿಮೆ ಆಗಿರುವುದಕ್ಕೆ ಬಿಜೆಪಿ ರೂಪಿಇಸದ ನೀತಿಗಳೇ ಕಾರಣ ಎಂದು ವಿರೋಧ ಪಕ್ಷದ ಕೆಲ ನಾಯಕರು ಆರೋಪಿಸುತ್ತಿದ್ದಾರೆ ಇದು ಶುದ್ಧ ಸುಳ್ಳು ಎಂದರು.

ಕಳೆದ ಮೂರು ವರ್ಷಗಳಲ್ಲಿ ಹಾಲು ಉತ್ಪಾದನೆಗೆ ಮೇಲೆ ಹೇಳಿದ ವಿಷಯಗಳು ಕಾರಣವೇ ಹೊರತು ನಮ್ಮ ನೀತಿಗಳಲ್ಲ. ನಿಮ್ಮ ಕಾಲದಲ್ಲಿ ೮೪ ಲಕ್ಷ ಲೀಟರ ಇದ್ದದ್ದನ್ನು ನಾವು ೯೪ ಲಕ್ಷ ಲೀಟರಿಗೆ ಹೆಚ್ಚಿಸಿದ್ದು ದುಷ್ಟ ನೀತಿನಾ, ಹೆಚ್ಚಿನ ಸಂಸ್ಕರಣ ಘಟಕ ಸ್ಥಾಪನೆ ಮಾಡಿದ್ದು ಮತ್ತು ೩ ವರ್ಷಗಳಲ್ಲಿ ೨-೩ ಮೆಗಾ ಡೈರಿ ಸ್ಥಾಪಿಸಿದ್ದು ದುಷ್ಟ ನೀತಿನಾ ಎಂದು ಪ್ರಶ್ನಿಸಿದರಲ್ಲದೆ ಎಲ್ಲ ವಿಷಯಗಳಲ್ಲಿ ರಾಜಕಾರಣವನ್ನು ಮಾಡುವ ಮೂಲಕ ದುಡಿಯುವ ನಮ್ಮ ರೈತಾಪಿ ವರ್ಗಕ್ಕೆ ಅಪಮಾನ ಮಾಡುತ್ತಿದ್ದಾರೆ ಎಂದು ವಿರೋಧ ಪಕ್ಷಗಳ ನಾಯಕರ ವಿರುದ್ಧ ಹರಿಹಾಯ್ದರು.

ಜಾನುವಾರುಗಳಿಗೆ ಧರ್ಮ ಗಂಟು ಬಂದ ಸಂದರ್ಭದಲ್ಲಿಯೂ ಸಹ ನಮ್ಮ ರೈತರು ಹೆಚ್ಚಿನ ಹಾಲು ಉತ್ಪಾದನೆಯನ್ನು ಮಾಡಿದ್ದಾರೆ ಅವರಿಗೆ ಅಪಮಾನವನ್ನು ಮಾಡಬೇಡಿ. ಅವರಿಗೆ ಅಭಿನಂದನೆಯನ್ನು ಸಲ್ಲಿಸಬೇಕು. ಅವರ ಶ್ರಮಕ್ಕೆ ಬೆಲೆ ಇದೆ ಇದು ದುಷ್ಟ ನೀತಿಯೇ ನೀವು ನೋಡುವ ದೃಷ್ಟಿ ದುಷ್ಟವಾಗಿದೆ. ನಮ್ಮ ನೀತಿಯಲ್ಲ. ಹಾಲು ಉತ್ಪಾದನೆಗೆ ಹೆಚ್ಚಿನ ಗಮನವನ್ನು ಕೊಡುತ್ತಿದ್ದೇವೆ ಎಂದು ಹೇಳಿದರು.
ಅನಾವಶ್ಯಕವಾಗಿ ಗೋತ್ಯೆ ತಡೆಗೆ ಗೋಹತ್ಯೆ ನಿಷೇಧ ಕಾಯ್ದೆಯನ್ನು ಜಾರಿಗೆ ತರಲಾಗಿದೆ. ಬೇರೆ ರಾಜ್ಯಗಳ ಕಟುಕರಿಗೆ ಗೋವುಗಳು ಹೋಗುವುದನ್ನು ತಡೆದಿದ್ದೇವೆ. ಅಕ್ರಮ ಗೋ ಸಾಗಾಣೆ ಮಾಡುವ ಹಲವರಿಗೆ ಶಿಕ್ಷೆ ಆಗುತ್ತಿದೆ. ಅದರ ಜೊತೆ ಜೊತೆಗೆ ವಯಸ್ಸಾದ ಜಾನುವಾರುಗಳು ರೈತರಿಗೆ ಹೋರೆ ಆಗುವುದನ್ನು ತಪ್ಪಿಸಲು ಅವುಗಳ ರಕ್ಷಣೆಗೆ ಇಗಾಗಲೇ ೩೦ ಜಿಲ್ಲೆಗಳಲ್ಲಿ ಗೋ ಶಾಲೆಗಳನ್ನು ತೆರೆಯಲಾಗಿದೆ. ಇದಲ್ಲದೆ ಪುಣ್ಯಕೋಟಿ ಎನ್ನು ಯೋಜನೆಯನ್ನು ಜಾರಿಗೆ ತರುವ ಮೂಲಕ ಪ್ರತಿ ಗೋ ರಕ್ಷಣೆಗಾಗಿ ವರ್ಷಕ್ಕೆ ೧೧ ಸಾವಿರ ನಿಗದಿ ಮಾಡಿ ಗೋವುಗಳ ದತ್ತು ಸ್ವೀಕಾರ ಯೋಜನೆಯನ್ನು ಜಾರಿಗೆ ತಂದಿದ್ದೇವೆ ಎಂದು ತಿಳಿಸಿದರು.
ಇಗಾಗಲೇ ದತ್ತು ಸ್ವೀಕಾರಕ್ಕಾಗಿ ೪೩ ಕೋಟಿರೂ ಸಾರ್ವಜನಿಕರು ನೀಡಿದ್ದಾರೆ. ಒಂದು ವಾರದಲ್ಲಿ ರಾಜ್ಯದ ಎಲ್ಲ ಗೋಶಾಲೆಗಳಿಗೆ ಒಟ್ಟು ೩೦ ಕೋಟಿ ರೂಗಳನ್ನು ಬಿಡುಗಡೆ ಮಾಡಲಾಗುವುದು ಎಂದರು.

ಸಹಕಾರ ಸಿಚಿವ ಎಸ್.ಟಿ.ಸೋಮಶೇಖರ, ಹಾವೇರಿ ಹಾಲು ಒಕ್ಕೂಟದ ಅಧ್ಯಕ್ಷ ಬಸವರಾಜ ಅರಬಗೊಂಡರ ಮಾತನಾಡಿದರು, ಅಧ್ಯಕ್ಷತೆ ವಹಿಸಿ ಎಸ್ಸಿ, ಎಸ್ಟಿ ಆಯೋಗದ ಅಧ್ಯಕ್ಷ ನೆಹರು ಓಲೇಕಾರ ಮಾತನಾಡಿದರು. ವೇದಿಕೆಯಲ್ಲಿ ಸಚಿವರಾದ ಬಿ.ಸಿ.ಪಾಟೀಲ, ಅರಬೈಲ್ ಶಿವರಾಮ ಹೆಬ್ಬಾರ, ಪ್ರಭು ಚವ್ಹಾಣ, ಶಾಸಕರು ಹಾಗೂ ವಿವಿಧ ಜನಪ್ತಿನಿಧಿಗಳು, ನಿಗಮ ಮಂಡಳೀಯ ಅಧ್ಯಕ್ಷರು ಉಪಾಧ್ಯಕ್ಷರು ಸೇರಿದಂತೆ ಅನೇಕ ಗಣ್ಯರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!