ಹೊಸದಿಗಂತ ವರದಿ, ಬೀದರ್:
ಪಶುಸಂಗೋಪನೆ ಹಾಗೂ ಬೀದರ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್ ಅವರು ಇಂದು ಬೊಂತಿ ತಾಂಡಾದ ನಿವಾಸದಲ್ಲಿ ಗ್ರಾಮಸ್ಥರಿಗೆ ಎಳ್ಳು-ಬೆಲ್ಲ ಹಂಚುವ ಮೂಲಕ ಮಕರ ಸಂಕ್ರಾಂತಿ ಹಬ್ಬವನ್ನು ಸರಳವಾಗಿ ಆಚರಿಸಿದರು.
ಎಳ್ಳು ಬೆಲ್ಲ ತಿಂದು ಒಳ್ಳೆಯ ಮಾತನಾಡೋಣ, ಕಳೆದ ವರ್ಷದ ಎಲ್ಲ ಕಹಿಗಳನ್ನು ಮರೆತು ಸಿಹಿಯಾದ ಮಾತುಗಳ ಮೂಲಕ ಬಾಂಧವ್ಯವನ್ನು ವೃದ್ಧಿಸೋಣ. ಈ ಮಕರ ಸಂಕ್ರಾಂತಿ ನಿಮ್ಮ ಬದುಕಿನಲ್ಲಿ ಸುಖ, ಶಾಂತಿ, ಉತ್ತಮ ಆರೋಗ್ಯ, ಸಂತೋಷವನ್ನು ಕರುಣಿಸಲಿ ಎಂದು ಶುಭ ಕೋರಿದರು.
ಸುಗ್ಗಿಯ ಹಬ್ಬ ಎಂದು ಕರೆಯಲಾಗುವ ಸಂಕ್ರಾಂತಿಯು ರೈತರು, ಪಶುಪಾಲಕರು ಹಾಗೂ ನಾಡಿನ ಸಮಸ್ತ ನಾಗರಿಕರಿಗೆ ಸಮೃದ್ಧಿ ತರಲಿ. ಕೋವಿಡ್ ಮಾಹಾಮಾರಿ ಬೇಗ ತೊಲಗಲಿ ಎಂದು ದೇವರಲ್ಲಿ ಪ್ರಾರ್ಥನೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಮುಖಂಡರಾದ ಮಾರುತಿ ಚವ್ಹಾಣ ಸೇರಿದಂತೆ ಮುಖಂಡರು ಹಾಗೂ ಗ್ರಾಮದ ಹಿರಿಯರಿದ್ದರು.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ