June 1, 2026
Monday, June 1, 2026
spot_img

Mint Soda | ಮಳೆ ಬಂದ್ರೂ ಸೆಕೆಗೇನು ಕಮ್ಮಿ ಇಲ್ಲ… ಅದಿಕ್ಕೆ ಕೂಲ್ ಕೂಲ್ ಪುದೀನಾ ಮಸಾಲಾ ಸೋಡಾ ಟ್ರೈ ಮಾಡಿ

ಮಳೆ ಬಂದ್ರು ಸೆಕೆ ಕೆಡಿಮೆ ಆಗ್ತಿಲ್ಲ ಹೀಗಾಗಿ, ದೇಹಕ್ಕೆ ತಂಪು ನೀಡುವ, ಜೀರ್ಣಕ್ರಿಯೆಗೂ ಸಹಾಯ ಮಾಡುವ ಪಾನೀಯಗಳಲ್ಲಿ ಪುದೀನಾ ಮಸಾಲಾ ಸೋಡಾ ಪ್ರಮುಖವಾಗಿದೆ. ಕೆಲವೇ ನಿಮಿಷಗಳಲ್ಲಿ ಮನೆಯಲ್ಲೇ ಸುಲಭವಾಗಿ ತಯಾರಿಸಬಹುದಾದ ಈ ಡ್ರಿಂಕ್ ರುಚಿ ಮತ್ತು ತಾಜಾತನ ಎರಡನ್ನೂ ನೀಡುತ್ತದೆ.

ಬೇಕಾಗುವ ಸಾಮಗ್ರಿಗಳು

ಪುದೀನಾ ಎಲೆಗಳು – 20 ರಿಂದ 25
ನಿಂಬೆರಸ – 1 ನಿಂಬೆಯಿಂದ
ಶುಂಠಿ – ಅರ್ಧ ಇಂಚಿನ ತುಂಡು
ಕಪ್ಪು ಉಪ್ಪು – ರುಚಿಗೆ ತಕ್ಕಷ್ಟು
ಜೀರಿಗೆ ಪುಡಿ – ¼ ಚಮಚ
ಸಕ್ಕರೆ – 1 ರಿಂದ 2 ಚಮಚ (ಐಚ್ಛಿಕ)
ತಣ್ಣನೆಯ ಸೋಡಾ – 1 ಲೋಟ
ಐಸ್ ಕ್ಯೂಬ್‌ಗಳು – ಅಗತ್ಯಕ್ಕೆ ತಕ್ಕಷ್ಟು

ಮಾಡುವ ವಿಧಾನ

ಮಿಕ್ಸಿ ಜಾರಿಗೆ ಪುದೀನಾ ಎಲೆಗಳು, ಶುಂಠಿ, ಕಪ್ಪು ಉಪ್ಪು, ಜೀರಿಗೆ ಪುಡಿ ಮತ್ತು ಸಕ್ಕರೆ ಹಾಕಿ. ಸ್ವಲ್ಪ ನೀರು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ.

ಒಂದು ದೊಡ್ಡ ಗ್ಲಾಸ್‌ಗೆ 2 ರಿಂದ 3 ಚಮಚ ಪುದೀನಾ ಮಿಶ್ರಣ ಹಾಕಿ. ಅದಕ್ಕೆ ನಿಂಬೆರಸ ಸೇರಿಸಿ ಚೆನ್ನಾಗಿ ಕಲಸಿ.

ಈ ಮಿಶ್ರಣದ ಮೇಲೆ ತಣ್ಣನೆಯ ಸೋಡಾ ಸುರಿಯಿರಿ. ಐಸ್ ಕ್ಯೂಬ್‌ಗಳನ್ನು ಹಾಕಿ ನಿಧಾನವಾಗಿ ಕಲಸಿದರೆ ಪುದೀನಾ ಮಸಾಲಾ ಸೋಡಾ ಸವಿಯಲು ಸಿದ್ಧ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !