October 9, 2026
Friday, October 9, 2026
spot_img

ಪ್ರಚಾರಕ್ಕೆ ಗೈರು? ನಟಿ ಸುಮನ್ ರಂಗನಾಥ್ ವಿರುದ್ಧ ಫಿಲಂ ಚೇಂಬರ್‌ಗೆ ದೂರು ಕೊಟ್ಟ ಚಿತ್ರತಂಡ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಿಡುಗಡೆಗೆ ಸಜ್ಜಾಗಿರುವ ‘ತದ್ವಿರುದ್ಧ’ ಚಿತ್ರದ ಪ್ರಚಾರ ಕಾರ್ಯದ ಮಧ್ಯೆ ಹೊಸ ವಿವಾದವೊಂದು ಎದ್ದಿದೆ. ಚಿತ್ರದ ನಿರ್ಮಾಣ ಸಂಸ್ಥೆ ಚಾರ್ಮಿಯನ್ ಮೋಷನ್ ಪಿಕ್ಚರ್ಸ್, ನಟಿ ಸುಮನ್ ರಂಗನಾಥ್ ಅವರು ಪ್ರಚಾರ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿಲ್ಲ ಎಂದು ಆರೋಪಿಸಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ಸಲ್ಲಿಸಿದೆ.

ಒಪ್ಪಂದದ ಷರತ್ತು ಉಲ್ಲಂಘನೆ ಆರೋಪ

ನಿರ್ಮಾಪಕರ ಹೇಳಿಕೆಯಂತೆ, ಒಪ್ಪಂದದ ಪ್ರಕಾರ ನಟಿಯವರು ನಟನೆ, ಡಬ್ಬಿಂಗ್ ಹಾಗೂ ಚಿತ್ರದ ಪ್ರಚಾರದಲ್ಲಿ ಭಾಗವಹಿಸಬೇಕಿತ್ತು. ಸಂಭಾವನೆಯನ್ನು ಸಂಪೂರ್ಣವಾಗಿ ಪಾವತಿಸಿದ್ದರೂ, ಕಳೆದ ಕೆಲವು ವಾರಗಳಿಂದ ನಟಿ ಮತ್ತು ಅವರ ವ್ಯವಸ್ಥಾಪಕರನ್ನು ಸಂಪರ್ಕಿಸಲು ಸಾಧ್ಯವಾಗಿಲ್ಲ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ:

ಬಿಡುಗಡೆಗೂ ಮುನ್ನ ಹೆಚ್ಚಿದ ಆತಂಕ

ಜುಲೈ 31ರಂದು ಸಿನಿಮಾ ಬಿಡುಗಡೆಯಾಗಲಿದ್ದು, ಈ ಅವಧಿಯ ಪ್ರಚಾರ ಚಿತ್ರದ ಯಶಸ್ಸಿಗೆ ಪ್ರಮುಖವಾಗಿದೆ. ನಟಿಯಿಂದ ಸಹಕಾರ ಸಿಗದಿದ್ದರೆ ಚಿತ್ರದ ಪ್ರಚಾರದ ಮೇಲೆ ಪರಿಣಾಮ ಬಿದ್ದು ಆರ್ಥಿಕ ನಷ್ಟವಾಗುವ ಸಾಧ್ಯತೆ ಇದೆ ಎಂದು ಚಿತ್ರತಂಡ ಆತಂಕ ವ್ಯಕ್ತಪಡಿಸಿದೆ.

ವಾಣಿಜ್ಯ ಮಂಡಳಿಯ ಮಧ್ಯಸ್ಥಿಕೆಗೆ ಮನವಿ

ಈ ವಿವಾದವನ್ನು ಸೌಹಾರ್ದಯುತವಾಗಿ ಬಗೆಹರಿಸುವಂತೆ ಚಿತ್ರತಂಡ ವಾಣಿಜ್ಯ ಮಂಡಳಿಯ ಮಧ್ಯಸ್ಥಿಕೆಯನ್ನು ಕೋರಿದೆ. ಈ ಆರೋಪಗಳಿಗೆ ಸಂಬಂಧಿಸಿದಂತೆ ನಟಿ ಸುಮನ್ ರಂಗನಾಥ್ ಅವರ ಪ್ರತಿಕ್ರಿಯೆ ಏನಿರಲಿದೆ ಎಂಬುದು ಈಗ ಕುತೂಹಲ ಮೂಡಿಸಿದೆ.

Must Read