Wednesday, July 6, 2022

Latest Posts

ಜೂ. 18, 19ಕ್ಕೆ ಹುಬ್ಬಳ್ಳಿಯಲ್ಲಿ ʼಮಿಷನ್ ಮೋದಿ‌ʼ ತರಬೇತಿ ಕಾರ್ಯಗಾರ

ಹೊಸದಿಗಂತ ವರದಿ, ಹುಬ್ಬಳ್ಳಿ:
ನಗರದ ಮಿಷನ್ ಮೋದಿ ಅಗೇನ್ ಪಿಎಂ ಡೆಮಾಕ್ರಸಿ ಡೆವಲಪ್ ಮೆಂಟ್ ಟ್ರಸ್ಟ್ ಹಾಗೂ ಎಸ್.ಎಸ್. ಶೆಟ್ಟರ ಫೌಂಡೇಶನ್ ಸಹಯೋಗದಲ್ಲಿ ಜೂ. 18, 19ರಂದು ಪ್ರಧಾನಿ ಮೋದಿಯವರು ಜನಪ್ರೀಯ ಯೋಜನೆಗಳ ಕುರಿತಾಗಿ ಎರಡು ದಿನದ ʼಮಿಷನ್ ಮೋದಿ‌ʼ ತರಬೇತಿ ಕಾರ್ಯಗಾರವನ್ನು ಇಲ್ಲಿನ ಆರ್.ಎನ್ .ಶೆಟ್ಟಿ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಮಿಷನ್ ಮೋದಿ ಅಗೇನ್ ಪಿಎಂ ಸಂಘಟನೆಯ ರಾಜ್ಯಧ್ಯಕ್ಷ ಗೋವಿಂದ ಕೃಷ್ಣಾಜಿ ಕುಲಕರ್ಣಿ ತಿಳಿಸಿದರು.
ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 18 ರಂದು ಬೆಳಿಗ್ಗೆ 11.30 ಕ್ಕೆ ತರಬೇತಿ ಕಾರ್ಯಾಗಾರವನ್ನು ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಶಾಸಕ ಜಗದೀಶ್ ಶೆಟ್ಟರ ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ಬಸವರಾಜ ಹೊರಟ್ಟಿ, ನಗರದ ಖ್ಯಾತ ನರರೋಗ ತಜ್ಞ ಡಾ. ಕ್ರಾಂತಿ ಕಿರಣ, ಮಧುಮೇಹ ತಜ್ಞ ಡಾ. ಜಿ.ಬಿ. ಸತ್ತೂರ ಮತ್ತು ಡಾ. ಅಮಿತ ಸತ್ತೂರ, ಮಿಷನ್ ಮೋದಿಯ ರಾಜ್ಯಾಧ್ಯಕ್ಷ ಗೋವಿಂದ ಕುಲಕರ್ಣಿ, ಕಾರ್ಯಾಧ್ಯಕ್ಷ ವೀರಣ್ಣ ಶೆಟ್ಟರ, ರಾಜ್ಯ ಮಹಿಳಾ ಅಧ್ಯಕ್ಷೆ ಹಲೆನ್ ಮೈಸೂರ ಭಾಗವಹಿಸುವರು ಎಂದು ಮಾಹಿತಿ ನೀಡಿದರು.
ರಾಷ್ಟ್ರೀಯ ಅಧ್ಯಕ್ಷ ರಾಮಗೋಪಾಲ ಕಾಕಾ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿಯರ ಅಭಿವೃದ್ಧಿ ಯೋಜನೆಗಳನ್ನು ಜನಸಾಮಾನ್ಯರಿಗೆ ಮುಟ್ಟಿಸಲು ಸಂಘಟನೆ ಶ್ರಮಿಸುತ್ತಿದೆ ಎಂದರು.
ರಾಜ್ಯ ಕಾರ್ಯಾಧ್ಯಕ್ಷ ವೀರಣ್ಣ ಶೆಟ್ಟರ, ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ಹಲೆನ್ ಮೈಸೂರು, ಜಿಲ್ಲಾಧ್ಯಕ್ಷ ಸಂಜಯ ರಾಂಕಾ, ಜಿಲ್ಲಾ ಪ್ರಧಾನ ಕಾರ್ಯ ದರ್ಶಿ ಗುರು ಬನ್ನಿಕೊಪ್ಪ ಇದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss