ವಿಶ್ವಕಪ್‌‌ ಟೂರ್ನಿನಲ್ಲಿ ಬೃಹತ್ ದಾಖಲೆ ಬರೆದ ಟೀಂ ಇಂಡಿಯಾ ನಾಯಕಿ ಮಿಥಾಲಿ ರಾಜ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಇಂದು ವೆಸ್ಟ್‌ ಇಂಡೀಸ್‌ ವಿರುದ್ಧ ಭಾರತದ ಮೂರನೇ ಟೆಸ್ಟ್‌ ಪಂದ್ಯದಲ್ಲಿ ಮಹಿಳಾ ತಂಡದ ನಾಯಕಿ ಮಿಥಾಲಿ ರಾಜ್‌ ದಾಖಲೆ ಬರೆದಿದ್ದಾರೆ.

ಮಿಥಾಲಿ ಮಹಿಳಾ ವಿಶ್ವಕಪ್ ಇತಿಹಾಸದಲ್ಲಿ ಭಾರತ ತಂಡದ ನಾಯಕಿಯಾಗಿ 23 ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿದ್ದಾರೆ. ಈಗ ನಡೆಯುತ್ತಿರುವ ವೆಸ್ಟ್‌ ಇಂಡೀಸ್‌ ವಿರುದ್ಧದ ಪಂದ್ಯದೊಂದಿಗೆ ಮಿಥಾಲಿ ವಿಶ್ವಕಪ್‌ ನಲ್ಲಿ 29ನೇ ಬಾರಿಗೆ ಭಾರತವನ್ನು ಮುನ್ನಡೆಸುತ್ತಿದ್ದಾರೆ.  ಈ ಮೂಲಕ ವಿಶ್ವಕಪ್‌ ಟೂರ್ನಿಯಲ್ಲಿ ಅತಿ ಹೆಚ್ಚು ಪಂದ್ಯಗಳಲ್ಲಿ ರಾಷ್ಟ್ರೀಯ ತಂಡವನ್ನು ಮುನ್ನಡೆಸಿದ ಮೊದಲ ನಾಯಕಿ ಎಂಬ ಕೀರ್ತಿಗೆ ಮಿಥಾಲಿ ಪಾತ್ರರಾಗಿದ್ದಾರೆ.

ಈ ಮುನ್ನ ಆಸ್ಟ್ರೇಲಿಯಾ ಮಹಿಳಾ ತಂಡದ ನಾಯಕಿ ಬೆಲಿಂಡಾ ಕ್ಲಾಕ್‌ ಅವರು ತಮ್ಮ ತಂಡವನ್ನು 23 ಬಾರಿ ವಿಶ್ವಕಪ್‌ ಟೂರ್ನಿಯಲ್ಲಿ ಮುನ್ನಡೆಸಿದ್ದಾರೆ. ಆದರೆ ಈಗ ಭಾರತ ತಂಡದ ನಾಯಕಿ ಮಿಥಾಲಿ ಇಂದು 24 ವಿಶ್ವಕಪ್‌ ಪಂದ್ಯಾವಳಿಗಳಲ್ಲಿ ತಂಡವನ್ನು ಮುನ್ನೆಸುವ ಮೂಲಕ ಬೆಲಿಂಡಾ ಅವರ ದಾಖಲೆಯನ್ನು ಹಿಂದಿಕ್ಕಿದ್ದಾರೆ.

ಮಿಥಾಲಿ ನಾಯಕತ್ವದಲ್ಲಿ ಭಾರತ ಈವರೆಗೆ 14 ಬಾರಿ ಗೆಲುವು ಪಡೆದುಕೊಂಡಿದೆ.

ಇನ್ನು ಯಾರೆಲ್ಲಾ ಇದ್ದಾರೆ ಟಾಪ್‌ 5 ಪಟ್ಟಿಯಲ್ಲಿ?

ಮಿಥಾಲಿ ರಾಜ್‌ (ಭಾರತ): 24 ಪಂದ್ಯ
ಬೆಲಿಂಡಾ ಕ್ಲಾರ್ಕ್‌ (ಆಸ್ಟ್ರೇಲಿಯಾ): 23 ಪಂದ್ಯ
ಸುಸಾನ್‌ ಗೋಟ್‌ಮ್ಯಾನ್‌ (ಇಂಗ್ಲೆಂಡ್‌): 19 ಪಂದ್ಯ
ಟ್ರಿಶ್‌ ಮೆಕ್‌ಕೆಲ್ವೀ (ನ್ಯೂಜಿಲೆಂಡ್‌): 15 ಪಂದ್ಯ
ಮ್ಯಾರಿ-ಪ್ಯಾಟ್‌ ಮೋರ್‌ (ಐರ್ಲೆಂಡ್‌): 15 ಪಂದ್ಯ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!