Sunday, June 26, 2022

Latest Posts

ನಾಲ್ಕು ರಾಜ್ಯಗಳಲ್ಲಿ ಜಯಭೇರಿ ಬೆನ್ನಲ್ಲೇ ತಾಯಿ ಭೇಟಿಯಾಗಿ ಆಶೀರ್ವಾದ ಪಡೆದ ಮೋದಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್
ಗುಜರಾತ್​ ಪ್ರವಾಸದಲ್ಲಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ತಮ್ಮ ತಾಯಿ ಹೀರಾಬೆನ್ ಅವರನ್ನು ಭೇಟಿಯಾಗಿದ್ದಾರೆ.
ಪಂಚರಾಜ್ಯಗಳ ಚುನಾವಣಾ ಫಲಿತಾಂಶ ಪ್ರಕಟವಾಗಿ ನಾಲ್ಕು ರಾಜ್ಯಗಳಲ್ಲಿ ಬಿಜೆಪಿ ಜಯಭೇರಿ ಭಾರಿಸಿದ ಮರುದಿನವೇ ಪ್ರಧಾನಿ ಮೋದಿ ತವರು ರಾಜ್ಯ ಗುಜರಾತ್​ಗೆ ತೆರಳಿದ್ದು, ಗುಜರಾತ್‌ ಮುಂದಿನ ಚುನಾವಣೆಗೆ ಪೂರ್ವಸಿದ್ಧತೆಗಳನ್ನು ನಡೆಸುತ್ತಿದ್ದಾರೆ. ನಿನ್ನೆ ಅಹ್ಮದಾಬಾದ್​ ನಿಂದ ಬಿಜೆಪಿ ಪ್ರಧಾನ ಕಚೇರಿ ಇರುವ ಗಾಂಧಿನಗರದ ವರೆಗೆ ರೋಡ್​ ಶೋ ನಡೆಸಿದ ಮೋದಿ ಬಳಿಕ ತಮ್ಮ ತಾಯಿ ಹೀರಾಬೆನ್ ನಿವಾಸಕ್ಕೆ ತೆರಳಿ ಕುಶಲೋಪರಿ ವಿಚಾರಿಸಿ, ಅವರೊಂದಿಗೆ ಊಟಮಾಡಿ, ಆಶೀರ್ವಾದ ಪಡೆದಿದ್ದಾರೆ.
ಈ ವರ್ಷಂತ್ಯದ ಡಿಸೆಂಬರ್‌ನಲ್ಲಿ ಗುಜರಾತ್‌ನಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಬಿಜೆಪಿ ಇಲ್ಲಿ 1998 ರಿಂದ ಗುಜರಾತ್‌ನಲ್ಲಿ ಅಧಿಕಾರದಲ್ಲಿದೆ. ಮತ್ತೊಮ್ಮೆ ಗುಜರಾತ್‌ ಗದ್ದುಗೆ ಹಿಡಿಯಲು ಬಿಜೆಪಿ ನಾಯಕರು ಪೂರ್ವಸಿದ್ಧತೆ ನಡೆಸುತ್ತಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss