ವಿಶ್ವಕಪ್:‌ ಸ್ಮೃತಿ, ಹರ್ಮನ್‌ಪ್ರೀತ್ ಭರ್ಜರಿ ಶತಕ; ವಿಂಡೀಸ್‌ಗೆ ಬೃಹತ್‌ ಟಾರ್ಗೆಟ್!

‌ಹೊಸದಿಗಂತ ಡಿಜಿಟಲ್‌ ಡೆಸ್ಕ್
ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ಟೂರ್ನಿಯ ತನ್ನ ಮೂರನೇ ಪಂದ್ಯದಲ್ಲಿ ವೆಸ್ಟ್‌ ಇಂಡೀಸ್‌ ವಿರುದ್ಧ ಕಣಕ್ಕಿಳಿದಿರುವ ಭಾರತ ತಂಡ ಆರಂಭಿಕ ಆಟಗಾರ್ತಿ ಸ್ಮೃತಿ ಮಂದಾನಾ, ಉಪನಾಯಕಿ ಹರ್ಮನ್‌ ಪ್ರೀತ್‌ ಕೌರ್‌ ಭರ್ಜರಿ ಶತಕಗಳ ಬಲದಿಂದ ಬೃಹತ್‌ ಮೊತ್ತ ಕಲೆಹಾಕಿದೆ.
ಟೂರ್ನಿಯಲ್ಲಿ ಜೀವಂತವಾಗಿಬೇಕಾದರೆ ಗೆಲ್ಲಲೇಬೇಕಾದ ಒತ್ತಡದಲ್ಲಿರುವ ಭಾರತತಂಡ ಟಾಸ್ ಗೆದ್ದು ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡಿತು. ಕೆರಿಬಿಯನ್‌ ಬೌಲರ್‌ ಗಳನ್ನು ಬೆಂಡೆತ್ತಿದ ಓಪನರ್‌ ಸ್ಮೃತಿ 119 ಎಸೆತಗಳಲ್ಲಿ 13 ಬೌಂಡರಿ, 2 ಸಿಕ್ಸರ್ ಗಳಿದ್ದ 123, ಉಪ ನಾಯಕಿ ಹರ್ಮನ್​ಪ್ರೀತ್ ಕೌರ್ 107 ಎಸೆತಗಳಲ್ಲಿ 10 ಬೌಂಡರಿ, 2 ಸಿಕ್ಸರ್​ನೊಂದಿಗೆ 109 ರನ್ ಸಿಡಿಸಿ ಅಬ್ಬರಿಸಿದರು. ಇವರಿಬ್ಬರ ಆಕರ್ಷಕ ಜೊತೆಯಾಟದ ಬಲದಿಂದ ಭಾರತ 50 ಓವರ್​ಗೆ 317 ರನ್ ಗಳ ಬೃಹತ್‌ ಮೊತ್ತ ಕಲೆಹಾಕಿದೆ.
ವೆಸ್ಟ್ ಇಂಡೀಸ್ ಪರ ಅನಿಸಾ ಮೊಹಮ್ಮದ್ 2, ಶಾಮಿಲಿಯಾ ಕೊನ್ನೆಲ್, ಶಕೆರಾ ಸೆಲ್ಮನ್, ಹೇಯ್ಲಿ ಮ್ಯಾಥ್ಯೂಸ್, ಡಿಯಾಂಡ್ರಾ ಡಾಟಿನ್ ತಲಾ 1 ವಿಕೆಟ್ ಕಬಳಿಸಿದರು.

ವೆಸ್ಟ್‌ ಇಂಡೀಸ್‌ ಗೆ ಅಬ್ಬರದ ಆರಂಭ!
ಬೃಹತ್ ಟಾರ್ಗೆಟ್‌ ಬೆನ್ನತ್ತಿರುವ ವೆಸ್ಟಿಂಡೀಸ್‌ ವನಿತೆಯರು‌ ಭರ್ಜರಿ ಆರಂಭ ಪಡೆದಿದ್ದಾರೆ. ವೆಸ್ಟಿಂಡೀಸ್‌ ‌11 ಓವರ್‌ ಗಳಲ್ಲಿ ವಿಕೆಟ್‌ ನಷ್ಟವಿಲ್ಲದೆ 87 ರನ್‌ ಕಲೆಹಾಕಿದ್ದು, ಓಪನರ್‌ ಗಳಾದ ದಿಯೇಂದ್ರ ಡಾಟಿನ್‌(50), ಹೆಯ್ಲಿ ಮ್ಯಾಥ್ಯೂಸ್‌(32) ಅಬ್ಬರದ ಆರಂಭ ನೀಡಿದ್ದಾರೆ. ಪಂದ್ಯ ಕುತೂಹಲಘಟ್ಟದತ್ತ ಸಾಗುತ್ತಿದ್ದು, ಭಾರತ ಬೇಗನೇ ವಿಕೆಟ್‌ ಪಡೆಯುವಲ್ಲಿ ಯಶಸ್ವಿಯಾದರೆ ಪಂದ್ಯ ಕೈವಶವಾಗಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!