ಬಳಕೆದಾರರ ಖುಷಿ ಹೆಚ್ಚಿಸುತ್ತಿದೆ ಯೂಟ್ಯೂಬ್ ನ ಹೊಸ ಫೀಚರ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌  
ವೀಡಿಯೊ ಹಂಚಿಕೆ ಪ್ಲಾಟ್‌ಫಾರ್ಮ್ ಯೂಟ್ಯೂಬ್ ತನ್ನ ಪ್ರೀಮಿಯಂ ಚಂದಾದಾರರೊಂದಿಗೆ ಹೊಸ ಮೊಬೈಲ್ ಅಪ್ಲಿಕೇಶನ್ ವೈಶಿಷ್ಟ್ಯವನ್ನು ಪರಿಚಯಿಸಿದ್ದು, ಬಳಕೆದಾರರ ಪ್ರತಿಕ್ರಿಯೆಯನ್ನು ಆಧರಿಸಿ ಈ ಫೀಚರ್‌ ಅನ್ನು ಇನ್ನಷ್ಟು ಸುಧಾರಣೆಗಳೊಂದಿಗೆ ಬಿಡುಗಡೆ ಮಾಡುವುದಾಗಿ ಹೇಳಿಕೊಂಡಿದೆ.
ನೀವು ಯೂಟ್ಯೂಬ್‌ ಬಳಕೆದಾರರಾಗಿದ್ದಲ್ಲಿ ಈಗಾಗಲೇ ಒಂದು ವಿಚಾರ ನಿಮ್ಮ ಗಮನಕ್ಕೆ ಬಂದಿರುತ್ತದೆ, ಮೊಬೈಲ್ ಅಪ್ಲಿಕೇಶನ್‌ನಲ್ಲಿ ಯೂಟ್ಯೂಬ್‌ ವೀಡಿಯೊಗಳನ್ನು ಜೂಮ್ ಮಾಡಲು ಸಾಧ್ಯವಾಗಿರುವುದಿಲ್ಲ. ಜೂಮಿಂಗ್‌ ಸೌಲಭ್ಯ ನೀಡುವಂತೆ ಹಲವಾರು ಬಳಕೆದಾರರು ಯೂಟ್ಯೂಬ್‌ ಸಂಸ್ಥೆಯನ್ನು ಕೋರಿದ್ದರು. ಈ ವಿಚಾರವನ್ನು ಪರಿಗಣಿಸಿರುವ ಸಂಸ್ಥೆ ಇದೀಗ ಪ್ರಾಯೋಗಿಕವಾಗಿ ಜೂಮ್ ಇನ್ ಗೆಸ್ಚರ್ ಅನ್ನು ಪರಿಚಯಿಸುತ್ತದೆ.
ಕಂಪನಿಯು ಹೇಳುವ ಪ್ರಕಾರ ಪ್ರಕಾರ, ಈ ವೈಶಿಷ್ಟ್ಯವನ್ನು ಸೆಪ್ಟೆಂಬರ್ 1 ರವರೆಗೆ ಪರೀಕ್ಷಾರ್ಥವಾಗಿ ನೀಡಲಾಗುತ್ತಿದೆ. ಆ ಬಳಿಕ ಬಳಕೆದಾರರ ಪ್ರತಿಕ್ರಿಯೆಯನ್ನು ಸಂಗ್ರಹಿಸಿ, ಅದನ್ನು ಹೆಚ್ಚು ಪರಿಷ್ಕರಿಸಿ ನೀಡಲಾಗುತ್ತದೆ ಎಂದು ಹೇಳಿದೆ.
ನೆನಪಿಡಿ, ಸದ್ಯಕ್ಕೆ ಈ ಆಪ್ಶನ್ ಯೂಟ್ಯೂಬ್ ಪ್ರೀಮಿಯಂಗೆ ಚಂದಾದಾರರಾಗಿರುವವರಿಗೆ ಮಾತ್ರ. ಈ ಆಫ್ಶನ್‌ ಅನ್ನು ಸಕ್ರಿಯಗೊಳಿಸಲು ಮೊದಲು ನಿಮ್ಮ ಫೋನ್‌ನಲ್ಲಿ ಅಥವಾ ವೆಬ್‌ಸೈಟ್‌ನಿಂದ YouTube ನ ಸೆಟ್ಟಿಂಗ್‌ಗಳ ಮೆನು ತೆರೆಯಿರಿ. ಅಲ್ಲಿರುವ ʼಹೊಸ ವೈಶಿಷ್ಟ್ಯಗಳನ್ನು ಪ್ರಯತ್ನಿಸಿʼ ವಿಭಾಗದಲ್ಲಿ ಈ ಆಯ್ಕೆ ಸಿಗಲಿದೆ. ಅದು ಸಕ್ರಿಯವಾದ ಬಳಿಕ ಬಳಕೆದಾರರಿಗೆ 8x ವರೆಗೆ ಜೂಮ್ ಇನ್ ಮಾಡಲು ಸಾಧ್ಯವಾಗುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!