ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಗ್‌ಬಾಸ್ ಮನೆಯ ಬಹುಮುಖ್ಯವಾಗಿದ್ದ ಸ್ಪರ್ಧಿ ಶಾಸಕ ಪ್ರದೀಪ್ ಈಶ್ವರ್ ದೊಡ್ಮನೆಯಿಂದ ಹೊರಬಿದ್ದಿದ್ದಾರೆ.
ನಿನ್ನೆಯಷ್ಟೇ ಶಾಸಕ ದೊಡ್ಮನೆಗೆ ಎಂಟ್ರಿ ನೀಡಿದ್ದು, ಭಾರೀ ಸದ್ದು ಮಾಡಿದ್ದರು. ಅಲ್ಲದೇ ಸಾಮಾಜಿಕ ಜಾಲತಾಣದಲ್ಲಿ ಈಶ್ವರ್ ಬಿಗ್‌ಬಾಸ್ ಮನೆಗೆ ಹೋಗಿದ್ದು ಸರಿಯೋ ತಪ್ಪೋ ಅನ್ನೋ ಚರ್ಚೆ ಕೂಡ ಆರಂಭವಾಗಿತ್ತು.
ಈ ಬೆನ್ನಲ್ಲೇ ಪ್ರದೀಪ್ ಈಶ್ವರ್ ಮನೆಯಿಂದ ಹೊರಬಿದ್ದಿದ್ದು, ಅವರು ಗೆಸ್ಟ್ ಆಗಿ ಮನೆಗೆ ಹೋಗಿದ್ದರು ಎನ್ನಲಾಗಿದೆ. ಕೆಲವೊಮ್ಮೆ ಜನರ ಅಭಿಪ್ರಾಯದ ಆಧಾರದ ಮೇಲೆಯೂ ಬಿಗ್‌ಬಾಸ್ ನಿರ್ಣಯ ತೆಗೆದುಕೊಳ್ಳಬಹುದಾಗಿದೆ, ಅಂತೆಯೇ ಪ್ರದೀಪ್ ಈಶ್ವರ್ ಒಳಗೆ ಹೋಗಿದ್ದಕ್ಕೆ ಸಾಕಷ್ಟು ನೆಗೆಟಿವ್ ಒಪಿನಿಯನ್ ದೊರೆತಿತ್ತು.
ಇದೀಗ ಬಿಗ್‌ಬಾಸ್ ಮನೆಯಿಂದ ಪ್ರದೀಪ್ ಹೊರಬಂದಿದ್ದು, ಬಿಗ್‌ಬಾಸ್‌ಗೆ ಹೋಗಲು ತೆಗೆದುಕೊಂಡ ಹಣವನ್ನು ಅನಾಥ ಮಕ್ಕಳಿಗೆ ನೀಡುತ್ತೇನೆ ಎಂದು ಹೇಳಿದ್ದಾರೆ.