ʻದಿ ಕೇರಳ ಸ್ಟೋರಿʼ ಚಲನಚಿತ್ರ ಉಚಿತ ವೀಕ್ಷಣೆಗೆ ಶಾಸಕ ಯತ್ನಾಳ ವ್ಯವಸ್ಥೆ

ಹೊಸದಿಗಂತ ವರದಿ ವಿಜಯಪುರ:‌ 

ದೇಶಾದ್ಯಂತ ಸಂಚಲನ ಮೂಡಿಸಿದ ಕೇರಳ ಸ್ಟೋರಿ ಚಲನಚಿತ್ರ ಸದ್ಯ ಉಚಿತ ವೀಕ್ಷಣೆಗೆ ಶಾಸಕ ಬಸನಗೌಡ ಪಾಟೀಲ ಯತ್ನಾಳ ನಗರದಲ್ಲಿ ಪ್ರೇಕ್ಷಕರಿಗೆ ವ್ಯವಸ್ಥೆ ಮಾಡಿದ್ದಾರೆ.

ಇಲ್ಲಿನ ಅಪ್ಸರಾ ಚಿತ್ರಮಂದಿರದಲ್ಲಿ ಕೇರಳ ಸ್ಟೋರಿ ಚಲನಚಿತ್ರವನ್ನು ಮೇ 16, 17 ಹಾಗೂ 18 ರಂದು ಮೂರು ದಿನಗಳ ಕಾಲ ಪ್ರತಿ ದಿನ ಮಧ್ಯಾಹ್ನ 12 ರಿಂದ 3 ಗಂಟೆ ವರೆಗಿನ ಶೋ ವೀಕ್ಷಣೆಗೆ ಉಚಿತ ವ್ಯವಸ್ಥೆ ಕಲ್ಪಿಸಲಾಗಿದೆ.

ವಿಶೇಷವಾಗಿ ಎಲ್ಲ ಸಹೋದರಿಯರು ಹಾಗೂ ಸಹೋದರರು ತಪ್ಪದೆ ಈ ಚಿತ್ರವನ್ನು ವೀಕ್ಷಣೆ ಮಾಡಲು ಶಾಸಕ ಯತ್ನಾಳ ವಿನಂತಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!